ಹೈ-ಕ ಹೋರಾಟದ ಸ್ವಾತಂತ್ರ್ಯ ಸೇನಾನಿ ಶರಣಬಸವರಾಜ್ ಬಿಸರಳ್ಳಿ ಲಿಂಗೈಕ್ಯ

ಕೊಪ್ಪಳ: ಹೈದ್ರಾಬಾದ್ ಕರ್ನಾಟಕ ವಿಮೋಚನೆಗಾಗಿ ಹೋರಾಟ ನಡೆಸಿದ್ದ ಸ್ವಾತಂತ್ರ್ಯ ಸೇನಾನಿ, ನಿವೃತ್ತ ಶಿಕ್ಷಕ ಶರಣಬಸವರಾಜ್ ಬಿಸರಳ್ಳಿ (94) ಭಾನುವಾರ ಇಹಲೋಕ ತ್ಯಜಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟ ಸೇರಿದಂತೆ ಅನೇಕ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡು ಜೈಲುವಾಸವನ್ನು ಬಿಸರಳ್ಳಿ ಅವರು ಅನುಭವಿಸಿದ್ದರು. ಮೃತರು ಆರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಪತ್ರಿಕಾ ದಿನಾಚರಣೆಯಲ್ಲಿ ಬಿಸರಳ್ಳಿ ಅವರನ್ನು ಸನ್ಮಾನಿಸಲಾಗಿತ್ತು. ದಾವಣಗೆರೆ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷರು, ಉಪಾದ್ಯಕ್ಷರು, ಕಾರ್ಯದರ್ಶಿ, ಖಜಾಂಚಿಗಳಿಂದ ಲಿಂಗೈಕ್ಯರಾದ ಬಿಸರಳ್ಳಿಗೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ನೆರವೇರಿಸಲಾಯಿತು.