ಅಸಾಧ್ಯವಾದುದನ್ನು ಸಾಧ್ಯವಾಗಿಸಲು ಸಂಕಲ್ಪ ತೊಟ್ಟಿದ್ದೇನೆ, ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಬಂದಿದ್ದೇನೆ, ನಿಮ್ಮ ಆಶೀರ್ವಾದ ಇರಲಿ : ವಾಗೀಶ್‌ಸ್ವಾಮಿ
ದಾವಣಗೆರೆ : ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಸಂಕಲ್ಪ ತೊಟ್ಟು ಮಾಯಕೊಂಡ ಎಸ್‌ಸಿ ಮೀಸಲು ವಿಧಾನಸಭಾಕ್ಷೇತ್ರದಲ್ಲಿ 2023 ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೆಜ್ಜೆ ಇಟ್ಟಿದ್ದು, ನಿಮ್ಮೆಲ್ಲರ ಬೆಂಬಲದ ಶ್ರೀರಕ್ಷೆಯೊಂದಿಗೆ ನನ್ನನ್ನು ಹಾರೈಸಿ, ನಿಮ್ಮ ಸೇವೆಗೆ ನಾನು ಸದಾ ಸಿದ್ದವಾಗಿರುತ್ತೇನೆ ಎಂದು ಬಿ.ಎಂ. ವಾಗೀಶಸ್ವಾಮಿ ಹೇಳಿದರು. ದಾವಣಗೆರೆ ತಾಲೂಕಿನ ಬಾಡ ಗ್ರಾಮದಲ್ಲಿ ಬಿ.ಎಂ. ವಾಗೀಶ್‌ಸ್ವಾಮಿ ಅಭಿಮಾನಿ ಬಳಗದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶ ಮತ್ತು ನಗೆಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಗ್ರಾಮಕ್ಕೂ ಸುಮಾರು 6 ತಿಂಗಳಿಂದ ಜನರ ಆಶೀರ್ವಾದ ಪಡೆಯಲು ಓಡಾಡುತ್ತಿದ್ದೇನೆ. ಓಡಾಡುವಾಗ ನೂರೆಂಡು ವಿಘ್ನವಾದವು. ನನಗೆ ಸುಮಾರು ಜನರು ಈ ಕ್ಷೇತ್ರದಲ್ಲಿ ಏಕೆ ಸ್ಪರ್ಧೇ ಬಯಸುತ್ತಿರುವೆ ಎಂದು ಹೇಳಿದರು. ಎಷ್ಟೋ ಜನ ನನ್ನ ತಡೆಯಲು ಬೇರೆ ಬೇರೆ ಮಾರ್ಗದಲ್ಲಿ ಅವಮಾನ ಮಾಡಲು ಮುಂದಾದರು. ಆದರೂ ಸಹ ಯಾರನ್ನು ದ್ವೇಷಿಸುವುದಿಲ್ಲ, ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಎಷ್ಟೋ ಜನ ದೌರ್ಜನ್ಯ ಮಾಡಿದರೂ, ಗೊಡ್ಡು ಬೆದರಿಕೆ ಓಡ್ಡಿದರು ಅವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಹರಿಹರ ಕ್ಷೇತ್ರದಲ್ಲಿ ನಾನು ಕೊನೆ ಭಾಗದ ರೈತರಿಗೆ ನೀರು ತರುವ ಸಲುವಾಗಿ, ರೈತರ ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದೇನೆ. ನನ್ನ ಹೋರಾಟ ಕಂಡ ಅಲ್ಲಿನ ಜನ ನನ್ನನ್ನು ಜಾತ್ಯಾತೀತವಾಗಿ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಅಣಜಿಯಲ್ಲಿ ಇದೇ ರೀತಿಯ ಸಭೆ ಮಾಡಿದಾಗ ಸುಮಾರು 8 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಆದರೆ ಇಲ್ಲಿ ಅದಕ್ಕೂ ಹೆಚ್ಚು ಜನ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸುತ್ತಿರುವ ನಿಮ್ಮ ಪ್ರೀತಿಗೆ ನಾನೆಂದು ಚಿರಋಣಿ ಎಂದರು. ದುಡ್ಡಿನ ಮೇಲೆ ರಾಜಕೀಯ ನಡೆಯುತ್ತದೆ ಎಂಬ ಮಾತಿದೆ. ಆದರೆ ನಾನು ಯಾವೊಂದು ಕೆಲಸ ಕಾರ್ಯಗಳಿಗೂ ಹಣವನ್ನು ವ್ಯಯಿಸಿಲ್ಲ. ನನ್ನ ಅಭಿಮಾನದಿಂದ ಅಭಿಮಾನಿಗಳೆ ನನ್ನ ಬೆಂಬಲಕ್ಕೆ ನಿಂತು ಅವರೆ ಎಲ್ಲವನ್ನು ನಿಭಾಯಿಸಿದ್ದಾರೆ ಎಂದು ಹೇಳಿದರು.
ಕೊರೋನಾ ಸಂದರ್ಭದಲ್ಲಿ ಮನೆಬಿಟ್ಟು ಹೊರಬರದಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಇಲಾಖೆ ಹೀಗೆ ಕೊರೋನಾ ವಾರಿಯರ್ಸ್ಗಳಾಗಿ ತಮ್ಮ ಜೀವ ಪಣಕ್ಕಿಟ್ಟು ಜನರ ಜೀವ ಕಾಪಾಡಲು ಹೋರಾಡಿದ ಈ ಮಹಿಳಾಮಣಿಗಳನ್ನು ಸನ್ಮಾನಿಸುವ ಭಾಗ್ಯ ಸಿಕ್ಕಿದ್ದು ಪುಣ್ಯವೇ ಸರಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿ. ಹೆಚ್. ಪ್ರಕಾಶ್, ರವಿ, ಶಾಂತಕುಮಾರ್, ಕುಬೇರಪ್ಪ, ಗಿರಿಸಿದ್ದಪ್ಪ, ಸಣ್ಣಗೌಡ್ರು, ಮಂಜಪ್ಪ, ಶ್ರೀನಿವಾಸ್, ನಾಗರಾಜಪ್ಪ, ಪೂಜಾರ್ ಮಹೇಶಪ್ಪ, ಸೋಮಶೇಖರಪ್ಪ, ಕಾಕನೂರ್ ನಾಗರಾಜಪ್ಪ, ಮಹರುದ್ರಪ್ಪ ಶೈಲಜಾ ಬಸವರಾಜಪ್ಪ, ಟಿ. ಮಂಜುಳಾ ರಾಜು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದರು.