8 ವರ್ಷದವಳಿದ್ದಾಗಲೇ ನನ್ನ ಮೇಲೆ ತಂದೆ ಲೈಂಗಿಕ ಶೋಷಣೆ ಮಾಡುತ್ತಿದ್ದರು: ಖುಷ್ಬೂ

8 ವರ್ಷದವಳಿದ್ದಾಗಲೇ ನನ್ನ ಮೇಲೆ ತಂದೆ ಲೈಂಗಿಕ ಶೋಷಣೆ ಮಾಡುತ್ತಿದ್ದರು: ಖುಷ್ಬೂ

ಚೆನ್ನೈ: ನಾನು ಎಂಟು ವರ್ಷದವಳಿದ್ದಾಗ ನನ್ನ ತಂದೆ ನನ್ನ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿದ್ದರು ಎಂದು ನಟಿ ಹಾಗೂ ತಮಿಳುನಾಡು ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಹೇಳಿದ್ದಾರೆ.

ಪತ್ರಕರ್ತೆ ಬರ್ಕಾ ದತ್ ಅವರ ದಿ ಮೋಜೊ ಸ್ಟೋರಿಯ ‘ವಿ ದಿ ವುಮನ್’ ಸಂದರ್ಶನದಲ್ಲಿ ಖುಷ್ಬೂ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ನನ್ನ ತಂದೆ, ನನ್ನ ತಾಯಿಯನ್ನು ತುಂಬಾ ಹೊಡೆಯುವುದು, ಹಿಂಸೆ ನೀಡುವುದು ಮಾಡುತ್ತಿದ್ದರು. ಹೆಂಡತಿ–ಮಕ್ಕಳನ್ನು ಹೊಡೆಯುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಆತ ಭಾವಿಸಿದ್ದ ಎಂದವರು ತಮ್ಮ ನೋವು ಹಂಚಿಕೊಂಡಿದ್ದಾರೆ.

ಕ್ರಮೇಣ ನಾನು 8 ವರ್ಷದವಳಿದ್ದಾಗ ನನ್ನ ಮೇಲೆ ಲೈಂಗಿಕ ಶೋಷಣೆ ಮಾಡಲು ಪ್ರಯತ್ನಿಸುತ್ತಿದ್ದ. ಆದರೆ, ಅದನ್ನು ನಾನು ಬಲವಾಗಿ ವಿರೋಧಿಸುತ್ತಿದ್ದೆ. 15 ವರ್ಷವಳಾದಾಗ ತಂದೆಯ ವಿರುದ್ಧ ಮಾತನಾಡಲು ಆರಂಭಿಸಿದ್ದೆ ಎಂದು ಹೇಳಿದ್ದಾರೆ.

ನನ್ನ ಮೇಲೆ ಶೋಷಣೆ ನಡೆಯುವುದುನನ್ನ ತಾಯಿ ಗಮನಕ್ಕೆ ಬಂದಿತ್ತು. ಆದರೆ, ಏನೇ ಆಗಲಿ ಪತಿಯೇ ಪರದೈವ ಎಂಬ ಮನೋಭಾವದ ಮಹಿಳೆ ಅವರಾಗಿದ್ದರು. ನಾನು 16 ವರ್ಷದವಳಿದ್ದಾಗ ತಂದೆ ನಮ್ಮನ್ನು ಬಿಟ್ಟು ಹೋದರು, ಮುಂದೆ ಅವರು ಏನಾದರು ಎಂಬ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

52 ವರ್ಷದ ಖುಷ್ಬೂ ಸುಂದರ್ ಬಾಲ್ಯದ ಹೆಸರು ನಖತ್ ಖಾನ್. ಮುಂಬೈನಲ್ಲಿ ಜನಿಸಿದ್ದ  ಅವರು ಭಾರತೀಯ ಚಿತ್ರರಂಗದಲ್ಲಿ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಬಹುತೇಕ ಎಲ್ಲ ಸೂಪರ್‌ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ.

ಖುಷ್ಬೂ ಅವರು ಕನ್ನಡದಲ್ಲಿ ಶಾಂತಿ–ಕ್ರಾಂತಿ, ರಣಧೀರ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!