ಕಾಡಾ ನಿರ್ದೇಶಕ ಹುದ್ದೆಯಿಂದ ಆರ್ ಡಿ ಪಿ ಆರ್ ಆಯುಕ್ತರಾಗಿ ಡಾ. ಹೆಚ್.ಎಸ್ ಪ್ರಕಾಶ್ ಕುಮಾರ್ ವರ್ಗಾವಣೆ
ಬೆಂಗಳೂರು: ಅಚ್ಚುಕಟ್ಟು ಪ್ರದೇಶಾಭಿವೃದ್ಧಿಗಳ ನಿರ್ದೇಶನಾಲಯ (ಕಾಡಾ) ನಿರ್ದೇಶಕ, ಪ್ರಧಾನ ಇಂಜಿನಿಯರ್ ಡಾ. ಹೆಚ್.ಎಸ್ ಪ್ರಕಾಶ್ ಕುಮಾರ್ ಅವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಹಿಂದೆ ಇದ್ದ ಆಯುಕ್ತರಾಗಿದ್ದ ಡಾ. ವಿಶಾಲ್ ಆರ್ ಅವರ ಸ್ಥಾನಕ್ಕೆ ವರ್ಗಾಯಿಸಿ ಪ್ರಕಾಶ್ ಕುಮಾರ್ ಅವರನ್ನು ನೇಮಿಸಿದೆ.