ದಾಖಲೆಯ 50 ದಿನಗಳಲ್ಲಿ 10 ಲಕ್ಷ ಟನ್ ಕಬ್ಬು ಅರೆದ ಎಸ್ ಎಸ್ ಮಲ್ಲಿಕಾರ್ಜುನ ಒಡೆತನದ ಐ ಸಿ ಪಿ ಎಲ್
ದಾವಣಗೆರೆ: ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಒಡೆತನದಲ್ಲಿ ಮುಧೋಳ್ ತಾಲ್ಲೂಕಿನ ಉತ್ತೂರು ಗ್ರಾಮದಲ್ಲಿರುವ ನಡೆಯತ್ತಿರುವ ಇಂಡಿಯನ್ ಕೇನ್ ಪವರ್ ಲಿಮಿಟೆಡ್ ಏಷ್ಯಾದಲ್ಲೇ ಅತಿ ಹೆಚ್ಚು ಕಬ್ಬು ಅಂದರೆ 50 ದಿನಗಳಲ್ಲಿ 10 ಲಕ್ಷ ಟನ್ ಅರಿದ ಹಿನ್ನೆಲೆಯಲ್ಲಿ ಸ್ಥಳೀಯ ರೈತ ಮುಖಂಡರುಗಳು ಕಂಪನಿಯ ಛೇರ್ಮನ್ ಡಾ|| ಶಾಮನೂರು ಶಿವಶಂಕರಪ್ಪ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ನೇಗಿಲು ನೀಡಿ, ಹಸಿರು ಶಾಲು ಹೊದಿಸಿ ಸನ್ಮಾನಿಸಿದರು.
ಇದೇ ವೇಳೆ ಪ್ರಗತಿಪರ ರೈತರಾದ ಗೋವಿಂದಪ್ಪ ಗುಜ್ಜನವರ್ ಅವರು 1 ಎಕರೆಯಲ್ಲಿ 105 ಟನ್ ಕಬ್ಬು ಬೆಳೆದಿರುವುದನ್ನು ಡಾ|| ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಬಳಿ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಸಚಿನ್ ಪಾಟೀಲ್, ವೆಂಕಣ್ಣ ಪೂಜಾರ್, ಮುಧೋಳ್‌ನ ಬಂಡು ಘಾಟ್ಗೆ, ಚಿ|| ಎಸ್.ಎಂ.ಸಮರ್ಥ್, ಕಂಪನಿಯ ಪ್ರಧಾನ ವ್ಯವಸ್ಥಾಪಕ ಪ್ರಕಾಶ್, ಸರವನ್, ಜೋಷಿ, ಮಾರುತಿ, ಉದ್ಯಮಿ ಎಸ್.ಕೆ.ವೀರಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಸಿ.ನಿಂಗಪ್ಪ, ಅನ್ವರ್ ತುರ್ಚಘಟ್ಟ, ರಾಘವೇಂದ್ರ ಶಿರಮಗೊಂಡನಹಳ್ಳಿ ಮತ್ತಿತರರಿದ್ದರು.