ಅಕ್ರಮ ಮರಳು ಸಾಗಾಟ : ಮರಳು ಸಹಿತ ಟಪ್ಪರ್ ವಶ
ದಾವಣಗೆರೆ: ಅಕ್ರಮವಾಗಿ ಮರಳು ತುಂಬಿಕೊಂಡು ಹರಿಹರದ ಕಡೆಯಿಂದ ಬರುತ್ತಿದ್ದ ಟಿಪ್ಪಲ್ ಲಾರಿಯನ್ನು ಹಳೆ ಬಾತಿ ಹತ್ತಿರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಏಪ್ರಿಲ್ 6ರಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಲಾರಿ ಸಂಖ್ಯೆ ಕೆಎ47 6263 ಟಿಪ್ಪರ್ ಲಾರಿ ಪರಿಶೀಲಿಸುವಾಗ ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಲಾರಿ ಪರಿಶೀಲಿಸಲಾಗಿ ಅದರಲ್ಲಿ 13 ಟನ್ ಮರಳು ಇದ್ದು, ಅಂದಾಜು 25 ಸಾವಿರ ರೂ.ಗಳಾಗಿವೆ. ಚಾಲಕ ಯಾವುದೇ ಪರವಾನಗಿ ಇಲ್ಲದೆ ಮರಳು ಸಾಗಿಸುತ್ತಿದ್ದು ಖಚಿತವಾಗಿದ್ದು, ಕ್ರಮ ತೆಗೆದುಕೊಳ್ಳುವಂತೆ ಮಾಯಕೊಂಡ ಪೊಲೀಸ್ ಠಾಣೆಯ ಸಿಬ್ಬಂದಿ ತಿಮ್ಮಪ್ಪ ಟಿ. ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.