ಪಿಸಿ ಮತ್ತು ಪಿಎನ್‍ಡಿಟಿ ಕಾಯ್ದೆ ಅನುಷ್ಠಾನ : ಮಾ. 30 ರಂದು ಅರಿವು ಕಾರ್ಯಗಾರ
ದಾವಣಗೆರೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿನ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅರಿವು ಮೂಡಿಸುವ ಕಾರ್ಯಗಾರವನ್ನು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಹತ್ತಿರ ಇರುವ ಗಾಂಧಿ ಭವನದಲ್ಲಿ ಮಾ.30 ರಂದು ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗರಾಜ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಚನ್ನಪ್ಪ ಎ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ, ಉಪ ವಿಭಾಗಾಧಿಕಾರಿ ಮಮತ ಹೊಸಗೌಡರ ಭಾಗವಹಿಸುವರು.
ವಿಶೇಷ ಆಹ್ವಾನಿತರಾಗಿ ಮಕ್ಕಳ ತಜ್ಞರು ಹಾಗೂ ಎಸ್.ಎಸ್.ಐ.ಎಂ.ಎಸ್ & ಆರ್.ಸಿ ಸಲಹಾ ಸಮಿತಿ ಅಧ್ಯಕ್ಷ ಡಾ. ಎನ್.ಕೆ.ಕಾಳಪ್ಪನವರ್, ಹಾಗೂ ಸಮಿತಿಯ ಸದಸ್ಯರುಗಳಾದ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಸದಸ್ಯೆ ಮೀರಾ ಹನಗವಾಡಿ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಅಶೋಕ್ ಕುಮಾರ್ ಡಿ, ಸಾಮಾಜಿಕ ಕಾರ್ಯಕರ್ತರಾದ ಶಾರದ ಎಂ ಮಾಗಾನಹಳ್ಳಿ, ಎಂ.ಜೆ ಶ್ರೀಕಾಂತ್ ರವರು ಭಾಗವಹಿಸುವರು.
ಕಾರ್ಯಕ್ರಮದ ಅಂಗವಾಗಿ ಸಲಹಾ ಸಮಿತಿ ಸದಸ್ಯರಾದ ವಕೀಲ ಬಿ.ಆರ್.ರವಿಕುಮಾರ, ರೇಡಿಯಾಲಾಜಿಸ್ಟ್ ಡಾ. ಕಿಶನ್ ಭಗವತ್, ಪ್ರಸೂತಿ ತಜ್ಞರಾದ ಡಾ. ಎಸ್.ಜಿ.ಭಾರತಿ, ರೇಡಿಯಾಲಾಜಿಸ್ಟ್ ಡಾ. ಸುಮಿತ್ರ ಐ ಅವರು ಉಪನ್ಯಾಸ ನೀಡುವರು.