ದಾವಣಗೆರೆ ಜಿಲ್ಲೆಯಲ್ಲಿ ಹೊಸ ವರ್ಷದ ನಂತರ ಒಂದು ಸಾಮಾನ್ಯ ಕೋವಿಡ್ ಸೇರಿ 3 ಪ್ರಕರಣ.!

ದಾವಣಗೆರೆ: ಹರಿಹರ ತಾಲ್ಲೂಕಿನ 70 ವರ್ಷ ವಯಸ್ಸಿನ ಪುರುಷರಿಗೆ ಸಾಮಾನ್ಯ ಜ್ವರವೆಂದು ಚಿಕಿತ್ಸೆಗೆ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ತೆರಳಿದಾಗ ಅಂದು ಕೋವಿಡ್ ಮಾದರಿ ಸಂಗ್ರಹಿಸಿ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯ ಪ್ರಯೋಗಶಾಲೆಯಲ್ಲಿ ಪರೀಕ್ಷಿಸಿದಾಗ ಕೋವಿಡ್ ಎಂದು ದೃಢಪಟ್ಟಿರುತ್ತದೆ.
ಪ್ರಸ್ತುತ ರೋಗ ಲಕ್ಷಣ ಚಿಕಿತ್ಸೆ ಪಡೆದು ಮಾರ್ಗಸೂಚಿಯನ್ವಯ ಮನೆಯಲ್ಲಿ ಪ್ರತ್ಯೇಕವಾಗಿರುತ್ತಾರೆ. ಸದರಿಯವರು 2 ಡೋಸ್ ಲಸಿಕೆಯನ್ನು ಪಡೆದಿರುತ್ತಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸದರಿಯವರು ಕಳೆದ 7 ದಿನಗಳಲ್ಲಿ ಎಲ್ಲಿಯೂ ಪ್ರಯಾಣ ಮಾಡಿರುವುದಿಲ್ಲ. ಇವರ ಮನೆಯಲ್ಲಿ 7 ಜನರಿದ್ದು, ಯಾರಿಗೂ ಆರೋಗ್ಯ ಸಮಸ್ಯೆ ಉಂಟಾಗಿರುವುದಿಲ್ಲ ಹಾಗೂ ಎಲ್ಲರೂ ಆರೋಗ್ಯವಾಗಿರುತ್ತಾರೆ. ಎಲ್ಲರೂ ಪ್ರಾಥಮಿಕ ಸಂಪರ್ಕಿತರಾಗಿದ್ದು, ಎಲ್ಲರ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಮನೆಯು ತೋಟದಲ್ಲಿರುವುದರಿಂದ ದ್ವಿತೀಯ ಸಂಪರ್ಕಿತರು ಇರುವುದಿಲ್ಲ.
ಮಾರ್ಗಸೂಚಿಗಳ ಪ್ರಕಾರ ಇವರ ಸಿ.ಟಿ. ದರ 25 ಕ್ಕಿಂತ ಹೆಚ್ಚು ಇದ್ದು (29) ಇರುವುದರಿಂದ ಜಿನೊಮಿಕ್ ಪರೀಕ್ಷೆಗೆ ಕಳುಹಿಸುವ ಅಗತ್ಯ ಇಲ್ಲದೇ ಇರುವುದರಿಂದ BF-7 ಅಲ್ಲದ ಸಾಮಾನ್ಯ ಕೋವಿಡ್ ಎಂದು ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು ಮೂರು ಪ್ರಕರಣಗಳು ಸಾಮಾನ್ಯ ಕೊವಿಡ್ ಎಂದು ವರದಿಯಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ