ದಾವಣಗೆರೆ : ಜಳಜಳನೇ ಹರಿವ ಹರಿದ್ರಾ ಹೊಳೆಯ ಅಲೇಯ..ತಿಳಿಯಲ್ಲಿ ಪೂರ್ಣ ಚಂದಿರನ ಬಿಂಬ ತಣ್ಣಗೆ ತಂಪಾಗಿ ಪೂರ್ಣ ಚಂದಿರನ ಬೆಳಕು, ಅಂದು ವಿಶೇಷ ಬೌದ್ಧ ಪೌರ್ಣಮಿ ಬೇರೆ,ಶ್ಯಾಗಲೆ ಶುಕ್ರವಾರ ಸಂತೆ ನೆರೆದು ಜನ ಕರಗಿದಂತೇ ಕಂಜರ ಸದ್ದಿಗೆ…. ಭಾರತೀಯ ಜನಕಲಾ ಸಮಿತಿಯ ಸ್ವಾಗತವೋ ಸುಸ್ವಾಗತವೋ,… ಕಂಚಿನ ಕಂಠದ ಧನಿಗೇ ಒಮ್ಮೇಲೆ ಹಿಮ್ಮೇಳ….ಊರು ಮುಂದಿನ ಜನರೆಲ್ಲ ಅಚ್ಚರಿ ಎಂಬಂತೆ ಈಗ ತಾನೇ ಸಂತೆ ನೆರೆದಿತ್ತು ಇದಾವ ದನಿಯೊಂದು ಒಬ್ಬಬ್ಬರೇ ಸುತ್ತ ನೆರೆದು ಕಂಜರದ ಶರಣು, ಕಂಠದ ಐರಣಿ ಚಂದ್ರು ಹಾಡಿಗೆ ತಲೆದೂಗುವಂತೇ … ಮೈಮರೆತರು. ಬುದ್ದನ ಸಂದೇಶ ಸಾರುವ ಕೆಲ ಗೀತೆಗಳು ಮೂಡಿ ಬಂದವು.
ಚುನಾವಣೆ ಅಬ್ಬರ ಜೋರಾಗಿದ್ದರೂ ಜನ ಇಪ್ಟಾ ಕಲಾತಂಡ ಕಲಾವಿದರ ಹಾಡುಗಳ ಮೆಲುಕು ಹಾಕುತ್ತಾ ನಿಂತೇ ಬೆಳದಿಂಗಳ ರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮ ಸವಿದಧ್ಧು.. ಸಮೀಪದ ಶ್ಯಾಗಲೆ ಗ್ರಾಮದಲ್ಲಿನ ಕರಿಯಮ್ಮನ ಗುಡಿ ಮುಂದೆ.
ದಾವಣಗೆರೆ ನಗರದ ಭಾರತೀಯ ಜನಕಲಾ ಸಮಿತಿ ಇಪ್ಟಾ ಪ್ರತಿ ತಿಂಗಳ ಹುಣ್ಣಿಮೆಯ ದಿನ ಜಿಲ್ಲೆಯ ಹಳ್ಳಿಯೋಂದರಲ್ಲಿ … ತಪ್ಪದೆ ಹಳೇ,ಹೊಸ ಕಲಾವಿದರು ಕೂಡಿ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಕಟ್ಟಕಡೇಯ ಗ್ರಾಮದ ಮಧ್ಯೆ ಹಲವು ಸೌಲಭ್ಯಗಳ ವಂಚಿತ ಸಮಸ್ಯೆ ಗಳ ಬಗ್ಗೆ ಬೀದಿ ನಾಟಕ ಆಡಿ, ಹಾಡುಗಳ ಮೂಲಕ ಸಂಭಂದಿಸಿದ ಜನಪ್ರತಿನಿಧಿಗಳ ಕಣ್ಣು ತೆರೆಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಂಸ್ಕೃತಿಕ ಸಾಮಾಜಿಕ ಕಳಕಳಿ ಯಿಂದ ಇಂಥ ವಿಭಿನ್ನ ರೀತಿಯ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ.
ಆಸಕ್ತ ಜನರು ಮನವಿಗೂ ಅವರು ಗ್ರಾಮದಲ್ಲಿ ಪ್ರತಿ ಹುಣ್ಣಿಮೆಯ ದಿನ ಇಪ್ಟಾ ಕಲಾತಂಡ ಬೆಳಂದಿಗಳಲ್ಲಿ ಇಪ್ಟಾ ಆಚರಿಸುತ್ತಿದ್ದು ಕರೋನ ಸಮಯದಲ್ಲಿ ನಿಲ್ಲಿಸಿದ ಈ ಕಾರ್ಯಕ್ರಮ ಕಳೆದ ತಿಂಗಳು ನಗರದ ಅವರಗೆರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಬಾರಿ ನಗರದಿಂದ ಹೊರಗಿನ ಕಡೆ ಭಾಗದ ಶ್ಯಾಗಲೆಯಲ್ಲಿ ಆಚರಿಸುವ ಮೂಲಕ ಸಾಮಾಜಿಕ ಕಳಕಳಿ, ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕ, ಜಾಗೃತಿ ಗೀತೆಗಳ ಪ್ರಸ್ತುತ ಪಡಿಸಿತು.
ಇಪ್ಟಾ ಜಿಲ್ಲಾ ಅಧ್ಯಕ್ಷ ಐರಣಿಚಂದ್ರು ನೇತೃತ್ವದಲ್ಲಿ ನಡೆದ ಈ ಬೆಳದಿಂಗಳಲ್ಲಿ ಇಪ್ಟಾ ಕಾರ್ಯಕ್ರಮದಲ್ಲಿ ಹಳೇಯ ಕಲಾವಿದರು,ಪುರಂದರ್ ಲೋಕಿ ಕೆರೆ, ಕುಕ್ಕುವಾಡ ಮಹಾಂತೇಶ್, ಶೌಕತ್ ಅಲಿ, ರುದ್ರೇಶ್ ಲೋಕಿಕೆರೆ, ಶಾಂಭವಿ, ಈಗೀನ ಹೊಸ ಯುವ ಉತ್ಸಾಹಿ ಕಲಾವಿದರಾದ ಖಾದರ್, ಹೂವಫ್ಫ,ಪಾಲ್ಗೊಂಡ ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸ್ಥಳೀಯ ಪಂಚಾಯತ್ ಸಹಯೋಗದಲ್ಲಿ ಪ್ರಜಾಪ್ರಭುತ್ವ ಹಬ್ಬ ಮತದಾನ ಜಾಗೃತಿ ಕಲರವ ಕೇಳಿಬಂತು,ಕಾರ್ಯಕ್ರಮ ಹಮ್ಮಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಿದ ಇಪ್ಟಾ ಸಂಘಟನಾ ಕಾರ್ಯದರ್ಶಿ ಶ್ಯಾಗಲೆ ಶರಣಪ್ಪ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
