ತುಂಗಭದ್ರಾ ನದಿಯಲ್ಲಿ ಎತ್ತುಗಳ ಮೈ ತೊಳೆಯುವಾಗ ನೀರುಪಾಲು: ಮೃತ ಮೂವರಲ್ಲಿ ಓರ್ವ ಶವ ಪತ್ತೆ
ಹೊನ್ನಾಳಿ : ತಾಲೂಕಿನ ಹಿರೇಗೋಣಿಗೆರೆ ಗ್ರಾಮದ ತುಂಗಭದ್ರಾ ನದಿಯಲ್ಲಿ ಎತ್ತುಗಳ ಮೈ ತೊಳೆಯಲು ಹೋಗಿದ್ದ ಮೂವರು ಯುವಕರು ನೀರು ಪಾಲಾಗಿದ್ದರು ಮೃತ ಮೂವರಲ್ಲಿ ಓರ್ವನ ಶವ ಮಾತ್ರ ಸಿಕ್ಕಿದೆ.
ಇನ್ನಿಬ್ಬರ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಹಿರೇಗೋಣಿಗೆರೆ ಗ್ರಾಮದ ವೀರಪ್ಪನವರ ಪುತ್ರ ಪವನ್, ಹಾಗೂ ಬಸವರಾಜಪ್ಪನವರ ಮಕ್ಕಳಾದ ಕಿರಣ್,ವರುಣ್ ನೀರು ಪಾಲಾದ ಯುವಕರು. ಭಾನುವಾರ ಮುಂಜಾನೆ ಹೊಲದಲ್ಲಿ ಬೇಸಾಯ ಮುಗಿಸಿ, ನಂತರ ತುಂಗಭದ್ರಾ ನದಿಯಲ್ಲಿ ಎತ್ತುಗಳಿಗೆ ನೀರು ಕುಡಿಸಿ ಮೈ ತೊಳೆಯಲು ಹೋದಾಗ ಎತ್ತು ಓರ್ವನನ್ನು ನೀರಿನಲ್ಲಿ ಎಳೆದುಕೊಂಡು ಹೋಗಿದ್ದು, ಆತನನ್ನು ಉಳಿಸಲು ಹೋದ ಇನ್ನಿಬ್ಬರು ಸಹ ನೀರು ಪಾಲಾಗಿದ್ದಾರೆ.
ವಯಸ್ಸಿಗೆ ಬಂದ ಮಕ್ಕಳನ್ನು ನೀರು ಪಾಲಾಗಿದ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತುಂಗಭದ್ರಾ ನದಿಯಲ್ಲಿ ಮುಳುಗಿ ನೀರು ಪಾಲಾದ ಮೂವರು ಯುವಕರಲ್ಲಿ ವರುಣ್ ಎಂಬುವವನ ಮೃತ ದೇಹ ಪತ್ತೆಯಾಗಿದ್ದು, ಇನ್ನಿಬ್ಬರಿಗಾಗಿ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಯವರು ಹುಡುಕಾಟ ನಡೆಸುತ್ತಿದ್ದಾರೆ.