8ರಂದು ಅಡಿಕೆ ಮಿಲ್ ಉದ್ಘಾಟನೆ, ವಿನೂತನ ಡ್ರೈಯರ್ ಲೋಕಾರ್ಪಣೆ

ಡಿಕೆ ಮಿಲ್ ಉದ್ಘಾಟನೆ
ದಾವಣಗೆರೆ : ಸ್ವದೇಶಿ ಅಡಿಕೆ ಮಿಲ್ಸ್ ಮತ್ತು ಎಂಜಿನಿಯರಿಂಗ್ ಅಡಿಕೆ ಮಿಲ್ ಉದ್ಘಾಟನೆ ಹಾಗೂ ವಿನೂತನ ಡ್ರೈಯರ್ ಲೋಕಾರ್ಪಣೆ ಕಾರ್ಯಕ್ರಮವನ್ನು ಇದೇ 8ರಂದು ಬೆಳಿಗ್ಗೆ 10 ಗಂಟೆಗೆ ಕಾರಿಗನೂರು ಕ್ರಾಸ್, ಸೃಷ್ಠಿ ಕಾನ್ವೆಂಟ್ ಹತ್ತಿರ ಹಮ್ಮಿಕೊಳ್ಳಲಾಗಿದೆ ಎಂದು ಮಿಲ್ ಮಾಲೀಕರಾದ ಬಿ.ವಿ. ನಾಗರಾಜ್ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್ ಉದ್ಘಾಟಿಸಲಿದ್ದಾರೆ.
ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಕೆ.ಮಾಡಾಳ್ ವಿರೂಪಾಕ್ಷಪ್ಪ, ಎಸ್.ಎ. ರವೀಂದ್ರನಾಥ್, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ವಿ.ಪಟೇಲ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಎಲ್.ಬಿ. ಕಾಂತರಾಜು, ಎಂ.ಎನ್. ಶಿವಾನಂದ ಉಪಸ್ಥಿತರಿದ್ದರು.