ಹಳೇ ಕುಂದುವಾಡದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ.

ದಾವಣಗೆರೆ : ನಗರದ ಹಳೇ ಕುಂದುವಾಡದಲ್ಲಿಂದು ಸ್ಮಾರ್ಟ್ ಸಿಟಿ, ಶಾಸಕರ ಅನುದಾನದಡಿ ನಿರ್ಮಾಣವಾಗಿರುವ ಸರ್ಕಾರಿ ಪ್ರಾಥಾಮಿಕ ಹಾಗೂ ಪ್ರೌಢಶಾಲೆ, ಪಿಯು ಕಾಲೇಜ್ ನ ನೂತನ ಕಟ್ಟಡಗಳು, ಕಾಪೌಂಡ್, ಸಿಸಿ ರಸ್ತೆಗಳನ್ನ ಶಾಸಕ ಎಸ್ ಎ ರವೀಂದ್ರನಾಥ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್ ಎ ರವೀಂದ್ರನಾಥ್, ಸರ್ಕಾರಿ ಶಾಲೆ ಬೆಳೆದರೆ ಬಡ ಮಕ್ಕಳಿಗೆ ಅನುಕೂಲ, ಈ ಹಿನ್ನಲೆ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲು ನಮ್ಮ ಸರ್ಕಾರ ಬದ್ದವಾಗಿದೆ, ಹಳೇ ಕುಂದುವಾಡ ಗ್ರಾಮದ ಮುಖಂಡರು, ಪ್ರತೀ ಭಾರೀ ಶಾಲೆಗೆ ಕಟ್ಟಡ, ಮೂಲಭೂತ ಸೌಕರ್ಯ ಕೇಳುತ್ತಾರೆ, ಸರ್ಕಾರಿ ಶಾಲೆಗಳ ಬಗ್ಗೆ ಮುಖಂಡರಿಗೆ ಇರುವ ಕಾಳಜಿ ಮೆಚ್ಚುವಂತದ್ದು, ಮಕ್ಕಳು ಇದರ ಸದುಪಯೋಗ ಪಡೆಯಬೇಕು, ಉತ್ತಮವಾಗಿ ಓದಿ ಶಾಲೆಗೆ, ತಂದೆ ತಾಯಿಗೆ ಹಾಗೂ ಗ್ರಾಮಕ್ಕೆ ಕೀರ್ತಿ ತರಬೇಕು ಎಂದರು.
ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಎಂಡಿ ವೀರೇಶ್ ಕುಮಾರ್, ಸ್ಮಾರ್ಟ್ ಸಿಟಿ ಸದಸ್ಯ ಹೆಚ್ ಎನ್ ಶಿವಕುಮಾರ್, ಪಾಲಿಕೆ ಸದಸ್ಯೆ ಶಿಲ್ಪಾ ಜಯಪ್ರಕಾಶ್, ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪ, ಎಸ್ ಡಿಎಂಸಿ ಅಧ್ಯಕ್ಷರಾದ ಗದಿಗೆಪ್ಪ, ಗುಡ್ಡಪ್ಪ ಮುಖಂಡರಾದ ಚಿಕ್ಕಪ್ಪರ ಹನುಮಂತಪ್ಪ ಜೆಸಿ ದೇವರಾಜ್, ಎನ್ ಟಿ ನಾಗರಾಜ್, ಕುಮಾರ್, ಅಕ್ಕಿ ಬಸವರಾಜ್, ಅಣ್ಣಪ್ಪ, ಶಿವರಾಜ್, ಗೋಪಾಲಪ್ಪ, ಸಣ್ಣಿಂಗಪ್ಪ, ರಾಜು ಕರೂರು, ಮಧುನಾಗರಾಜ್, ನವೀನ್, ಮಂಜಣ್ಣ ಸೇರಿದಂತೆ ಅಧಿಕಾರಿಗಳು, ಗ್ರಾಮದ ಮುಖಂಡರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.