ತಿರುಪತಿ ದೇಗುಲಕ್ಕೆ ಇನ್ಫೋಸಿಸ್ ಮೂರ್ತಿ ದಂಪತಿಯಿಂದ ಬಂಗಾರದ ಶಂಖ ಹಾಗೂ ಆಮೆ ವಿಗ್ರಹ ಕಾಣಿಕೆ

ತಿರುಪತಿ ದೇಗುಲಕ್ಕೆ ಇನ್ಫೋಸಿಸ್ ಮೂರ್ತಿ ದಂಪತಿಯಿಂದ ಬಂಗಾರದ ಶಂಖ ಹಾಗೂ ಆಮೆ ವಿಗ್ರಹ ಕಾಣಿಕೆ

ತಿರುಪತಿ: ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾಗಿರುವ ಎನ್‌.ಆರ್. ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ದಂಪತಿ ತಿರುಪತಿ‌ ವೆಂಕಟೇಶ್ವರ ದೇವರಿಗೆ ಬಂಗಾರದ ಶಂಖ ಹಾಗೂ ಆಮೆ ವಿಗ್ರಹವನ್ನು ಕಾಣಿಕೆಯಾಗಿ ಸಮರ್ಪಿಸಿದ್ದಾರೆ.

ಶ್ರೀವಾರಿ ಪೂಜೆಗೆ ಬಳಸುವ ಅಭಿಷೇಕದ ಶಂಖ ಹಾಗೂ ಕೂರ್ಮಪೀಠವನ್ನು ದಾನವಾಗಿ ಕೊಟ್ಟಿದ್ದಾರೆ. ಈ ಕಾಣಿಕೆಗಳು ಸುಮಾರು 2 ಕಿಲೋ ತೂಕವಿದ್ದು, 1.25 ಕೋಟಿ ರೂಪಾಯಿ ಮೌಲ್ಯದ್ದು ಎನ್ನಲಾಗಿದೆ.

ಈ ಭಾರೀ ಮೊತ್ತದ ಕಾಣಿಕೆ ಸಮರ್ಪಿಸಿದ ನಾರಾಯಣಮೂರ್ತಿ ದಂಪತಿಯನ್ನು ತಿರುಪತಿ ದೇಗುಲದ ಸಿಇಒ ಧರ್ಮ ರೆಡ್ಡಿ ಅವರು ಶೇಷವಸ್ತ್ರ ತೊಡಿಸಿ ಪ್ರಸಾದ ಕೊಟ್ಟು ಗೌರವಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!