ಪದವಿ ಪಡೆದವರಿಂದ ಪ್ರೇರಣೆ ಪಡೆದು ಸಾಧಿಸಿ: ರಾಜ್ಯಪಾಲ ಗೆಹ್ಲೋಟ್
ದಾವಣಗೆರೆ: ಭಾರತ ಯುವಜನರ ದೇಶ. ಯುವಜನರಿಗೆ ದೇಶದ ಮೇಲೆ ಸಾಕಷ್ಟು ಅಪೇಕ್ಷೆ ಇದೆ. ಜೊತೆಗೆ ಅನೇಕ ಸವಾಲುಗಳೂ ನಮ್ಮ ಮುಂದಿವೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ. ದಾವಣಗೆರೆ ವಿಶ್ವ ವಿದ್ಯಾಲಯದ 9ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪದವಿ ಪಡೆದವರಿಂದ ಪ್ರೇರಣೆ ಪಡೆದು ಹೆಚ್ಚು ಸಾಧನೆ ಮಾಡಬೇಕೆಂದರು. 21ನೇ ಶತಮಾನ ನಮ್ಮ ದೇಶಕ್ಕೆ ಹೊಸ ದಿಶೆಯನ್ನು ನೀಡಿದೆ. ಭಾರತ ವಿಶ್ವಗುರು ಆಗುವ ಹಾದಿಯಲ್ಲಿ ಸಾಗುತ್ತಿದೆ. ಎಲ್ಲರೂ ದೇಶದ ಅಭಿವೃದ್ದಿಗೆ ಪೂರಕ ಚಿಂತನೆ ರೂಢಿಸಿಕೊಳ್ಳಬೇಕು ಎಂದು ಕರೆ ಕೊಟ್ಟರು.
ಸಾಧಕರಿಗೆ ಡಾಕ್ಟರೇಟ್: ಹಂಪಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊ. ಡಾ.ಲಕ್ಷ್ಮಣ್ ತೆಲಗಾವಿ, ಜಾನಪದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಿತ್ರದುರ್ಗ ಜಿಲ್ಲೆಯ ಡಾ. ಮೀರಸಾಬಿ ಹಳ್ಳಿ ಶಿವಣ್ಣ, ದಾವಣಗೆರೆಯ ತಪೋವನ ಇನ್ಸ್ಸ್ಟ್ಟಿಟ್ಯೂಟ್ ಸಿಇಒ ಡಾ. ಶಶಿಕುಮಾರ್ ಅವರಿಗೆ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.