Exclusive: Ex CM IPL Match: “ಐಷಾರಾಮಿ ಕಾರಿನಲ್ಲಿ ಮಾಜಿ ಸಿಎಂ ಕುತೂಹಲದಿಂದ ಐಪಿಎಲ್ ಮ್ಯಾಚ್ ವೀಕ್ಷಣೆ” ಯಾರು ಆ ಮಾಜಿ ಸಿಎಂ.? ಯಾವ ತಂಡದ ಮ್ಯಾಚ್ ಗೊತ್ತಾ.?

Exclusive Report:-
ಶಿವಮೊಗ್ಗ: ಶುಕ್ರವಾರ ಆರ್ ಸಿಬಿ ಮತ್ತು ದೆಹಲಿ ತಂಡಗಳ ನಡುವೆ ಐಪಿಎಲ್ ಮ್ಯಾಚ್ ನಡೆದಿದ್ದು.ಆರ್ ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ ತಂಡವನ್ನು ಮಣಿಸಿದೆ.
ಮೊದಲು ಬ್ಯಾಟ್ ಮಾಡಿದ ದೆಹಲಿ ಕ್ಯಾಪಿಟಲ್ 164 ರನ್ನಗಳನ್ನು ಗಳಿಸಿತ್ತು. ಗೆಲ್ಲಲೂ 165 ಗಳ ಗುರಿ ಬೆನ್ನತ್ತಿದ ಆರ್ ಸಿಪಿ ತಂಡ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬಿರಿತು. ಕೊನೆಯ ಎಸೆತದಲ್ಲಿ ಆರ್ ಸಿಬಿ ತಂಡ ಪಂದ್ಯವನ್ನು ಗೆಲುವಾಗಿ ಮಾರ್ಪಾಡು ಮಾಡಿಕೊಂಡಿತು.
ಈ ಕುತೂಹಲಕಾರಿ ಪಂದ್ಯವನ್ನು ಮಾಜಿ ಮಖ್ಯಮಂತ್ರಿ ಬಿ .ಎಸ್ ಯಡಿಯೂರಪ್ಪ ವೀಕ್ಷಣೆ ಮಾಡಿದ್ದಾರೆ. ಅದು ಸಹ ಅವರ ಐಷಾರಾಮಿ ಕಾರಿನಲ್ಲಿ.
ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿ ಇರುವ ನಿಕಟಪೂರ್ವ ಮುಖ್ಯಮಂತ್ರಿಗ ಬಿ.ಎಸ್ ಯಡಿಯೂರಪ್ಪ ಶುಕ್ರವಾರ ರಾತ್ರಿ ನಡೆದ ಆರ್ ಸಿಬಿ ಮತ್ತು ದೆಹಲಿ ತಂಡಗಳ ಪಂದ್ಯವನ್ನು ವೀಕ್ಷಣೆ ಮಾಡುವ ಮೂಲಕ ಕ್ರೀಡೆಯ ಮೇಲೆ ಅವರಿಗಿರುವ ಆಸಕ್ತಿಯನ್ನು ತೋರಿಸಿದ್ದಾರೆ.
ಶಿವಮೊಗ್ಗದಿಂದ ಶಿಕಾರಿಪುರದ ಅವರ ನಿವಾಸಕ್ಕೆ ತೆರಳುವ ಮಾರ್ಗದಲ್ಲಿ ಕ್ರಿಕೆಟ್ ವೀಕ್ಷಣೆ ಮಾಡಿದ್ದಾರೆ. ಐಪಿಎಲ್ ತಂಡಗಳಲ್ಲಿ ಆರ್ ಸಿಬಿ ತಂಡಕ್ಕೆ ಹೆಚ್ಚಿನ ಅಭಿಮಾನಿಗಳು ಇದ್ದಾರೆ.
ಈ ಬಾರಿ ಕಪ್ ಆರ್ ಸಿ ಬಿ ಗೆಲ್ಲುತ್ತದೆ ಎಂಬ ಆಧ್ಯಮ್ಯ ವಿಶ್ವಾಸ ಆರ್ ಸಿಬಿ ಅಭಿಮಾನಿಗಳದ್ದು. ಪ್ರಶಸ್ತಿ ಗೆಲ್ಲುವ ಮೂಲಕ ಅಭಮಾನಿಗಳಿ ಈ ಬಾರಿ ಖುಷಿ ನೀಡುವ ಕೆಲಸವನ್ನುಆರ್ ಸಿಬಿ ಮಾಡುತ್ತಾ ಕಾದು ನೋಡಬೇಕು.