ಲೋಕಲ್ ಸುದ್ದಿ

ಮತಗಟ್ಟೆಯಲ್ಲಿ ಬೇಜವಾಬ್ದಾರಿ: ಇನ್‌ಸ್ಪೆಕ್ಟರ್ ಭವ್ಯ ಅಮಾನತು

ಮತಗಟ್ಟೆಯಲ್ಲಿ ಬೇಜವಾಬ್ದಾರಿ: ಇನ್‌ಸ್ಪೆಕ್ಟರ್ ಭವ್ಯ ಅಮಾನತು

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿ ಮುನ್ನಡೆಸಲು ವಿವಿಧ ಇಲಾಖೆಗಳ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ. ಈ ನಡುವೆ ಮಹಿಳಾ ಇನ್ಸ್​ಪೆಕ್ಟರ್ ಒಬ್ಬರು ಉದ್ಧಟತನ ತೋರಿ ಅಮಾನತುಗೊಂಡಿದ್ದಾರೆ. ಭವ್ಯ ಎಂಬುವರು ಮತಗಟ್ಟೆಯಲ್ಲಿ ಬೇಜವಾಬ್ದಾರಿ ಮೆರೆದು ಅಮಾನತುಗೊಂಡ ಇನ್ಸ್​ಪೆಕ್ಟರ್.

ಚುಣಾವಣಾ ಕರ್ತವ್ಯಕ್ಕೆ ತೆರಳುವ ಮುನ್ನ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಮತಗಟ್ಟೆ ತರಬೇತಿ ನಿಯೋಜನೆ ಮಾಡಲಾಗಿತ್ತು. ಈ ವೇಳೆ ಮಹಿಳಾ ಇನ್ಸ್ಪೆಕ್ಟರ್ ಭವ್ಯ ಉದ್ಧಟತನ ತೋರಿದ್ದಾರೆ. ತರಬೇತಿಗೆ ಸರಿಯಾಗಿ ಹಾಜರಾಗದೆ ಪತ್ರಿಕೆ ಓದುತ್ತಾ ಕುಳಿತಿದ್ದಾರೆ.

ತರಬೇತಿಗೆ ಸರಿಯಾಗಿ ಹಾಜರಾಗದೇ ಇರುವುದನ್ನು ನೋಡಲ್ ಅಧಿಕಾರಿ ಹಾಗು ಸೆಕ್ಟರ್ ಅಧಿಕಾರಿ ಪ್ರಶ್ನಿಸಿದಾಗ ಉದ್ಧಟತನ ಮರೆದಿದ್ದಾರೆ. ‘ನಾನು ಮಾಡುತ್ತಿರುವುದು ಸರಿ, ತರಬೇತಿ ಕೊಡುವುದು ನಿಮ್ಮ ಕೆಲಸ. ತರಬೇತಿ ಪಡೆಯುವುದು ಬಿಡುವುದು ನಮ್ಮಿಷ್ಟ. ನೀವ್ ಹೇಳಿದಂತೆ ಕೇಳೋದಕ್ಕೆ ನಾನು ನಿಮ್ಮ ಡಿಪಾರ್ಟ್ಮೆಂಟ್ ಅಲ್ಲ. ಈ ತರಬೇತಿ ಉಪಯೋಗಕ್ಕಿಲ್ಲ’ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಬೇಜವಾಬ್ದಾರಿಯಾಗಿ ಮಾತನಾಡಿ ಇನ್ಸ್​ಪೆಕ್ಟರ್ ಬಗ್ಗೆ ಅಧಿಕಾರಿಗಳು ಬಿಬಿಎಂಪಿ ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನಲೆ ಪ್ರಜಾಪ್ರತಿನಿಧಿ ಕಾಯ್ದೆಯಡಿ ಜಿಲ್ಲಾ ಚುನಾವಣಾಧಿಕಾರಿ ಇನ್ಸ್​ಪೆಕ್ಟರ್ ಭವ್ಯಾ ಅವರನ್ನು ಅಮಾನತುಗೊಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top