ಪಕ್ಷ ನಮ್ಮಪ್ಪನ ಆಸ್ತಿನಾ? ಟಿಕೆಟ್ ಕೊಡಲೇ ಬೇಕೆಂಬ ಕಾನೂನಿಲ್ಲ – ಶಾಸಕ ರೇಣುಕಾಚಾರ್ಯ

ದಾವಣಗೆರೆ: ಭಾರತೀಯ ಜನತಾಪಕ್ಷದ ವರಿಷ್ಟರು ಕರ್ನಾಟಕದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದಿದ್ದಾರೆ. 2023ಕ್ಕೆ 150 ಸ್ಥಾನ ಗೆಲ್ಲುವ ಟಾರ್ಗೆಟ್ ನೀಡಿದ್ದಾರೆ ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಷಾ, ಜೆ.ಪಿ. ನಡ್ಡಾ ಅವರಿಗೆ ಕರ್ನಾಟಕದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಿಕ್ಕೆ ಬರಬೇಕೆಂಬ ಅಪೇಕ್ಷೆ ಇದೆ.
ಸಂಘಟನೆಗೆ ಹೆಚ್ಚು ಆದ್ಯತೆ ಕೊಡುತ್ತೇವೆ. ನಾವೆಲ್ಲಾ ಒಟ್ಟಾಗಿ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ. ಜನಾದೇಶ ನಮ್ ಮಪರವಾಗಿಯೇ ಬರುತ್ತದೆ.
ವಿಧಾನಸಭಾ ಚುನಾವಣೆಗೆ ಹಾಲಿ ಶಾಸಕರಿಗೆ ಟಿಕೆಟ್ ಕೊಡಲೇ ಬೇಕೆಂದಿಲ್ಲ. ಪಕ್ಷ ಏನಾದರೂ ನಿರ್ಣಯ ತೆಗೆದುಕೊಳ್ಳಬಹುದು. ಪಕ್ಷದ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರಬೇಕು. ಪಕ್ಷವೇನು ನಮ್ಮಪ್ಪನ ಆಸ್ತಿಯಲ್ಲ. ಟಿಕೆಟ್ ಕೊಡಲೇ ಬೇಕೆಂಬ ಕಾನೂನು ಇಲ್ಲ ಎಂದು ರೇಣುಕಾಚಾರ್ಯ ಹೇಳಿದರು.