ಕರ್ನಾಟಕದ ಕೆಲವು ಸಂಸದರು ಸಂಸತ್ತಿನಲ್ಲಿ ಬಾಯಿಯೇ ಬಿಟ್ಟಿಲ್ಲವಂತೆ – ಸಾಗರ್ ಎಲ್ ಎಂ ಹೆಚ್
ದಾವಣಗೆರೆ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಹೀಗೊಂದು ವರದಿ ಕೇಳಿಸುತ್ತಿದೆ, ಅದೇನೆಂದರೆ ಕಳೆದ ಐದು ವರ್ಷಗಳಲ್ಲಿ ಕರ್ನಾಟಕದ ಕೆಲವು ಸಂಸದರು ಸಂಸತ್ತಿನಲ್ಲಿ ಬಾಯಿಯೇ ಬಿಟ್ಟಿಲ್ಲ ಅಂತೆ, ಹಾಗಾದರೆ ಇವರು ಪ್ರತಿನಿಧಿಸುವ ಕ್ಷೇತ್ರಕ್ಕಾಗಿ ಸಂಸತ್ತಿನಲ್ಲಿ ಏನು ಕೇಳಿಯೇ ಇಲ್ಲ ಎನ್ನುವುದಂತು ಸತ್ಯ, ಹಾಗಾದರೆ ಆ ಕ್ಷೇತ್ರದ ಅಭಿವೃದ್ಧಿ ಎಷ್ಟು ಆಗಿರಬಹುದು ಎನ್ನುವುದು ಯೋಚಿಸಬೇಕಾದ ವಿಚಾರ, ಇದಕ್ಕೆಲ್ಲ ಕಾರಣ ಇಷ್ಟೇ ತಮ್ಮ ಹಕ್ಕನ್ನು ವಿವೇಚನೆಯಿಂದ ಚಲಾಯಿಸುವುದರ ಬದಲು ಯಾರದೋ ಮುಖ ನೋಡಿ ಮತ್ಯಾರನ್ನು ಆರಿಸುವ ಪ್ರವೃತ್ತಿ ಇತ್ತೀಚಿನ ಚುನಾವಣೆಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ, ಬೇರೆ ಯಾರಿಗೂ ಬಲ ತುಂಬಲಿಕ್ಕಾಗಿ ಅಸಮರ್ಥ ಅಭ್ಯರ್ಥಿಯನ್ನು ಆರಿಸುತ್ತಿರುವುದು ಬೇಸರದ ಸಂಗತಿ ಅಲ್ಲದೆ ಮತ್ತಿನ್ನೇನು, ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಪಕ್ಷಗಳೊಂದಿಗೆ ಗುರುತಿಸಿಕೊಳ್ಳುವುದು ಸಹಜ ಆದರೆ ಜನರಿಗೆ ಬೆನ್ನು ಮಾಡಿ ಪಕ್ಷದ ನಾಮ ಬಲದಿಂದಲೇ ರಾಜಕಾರಣ ಮಾಡಬಹುದೆನ್ನುವ ಪ್ರವೃತ್ತಿ ಜಾಸ್ತಿಯಾಗಿದೆ ಅನಿಸುತ್ತದೆ,ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಜನರೊಂದಿಗೆ ಸಹಕರಿಸುವ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಚಾರವಂತ ಮತದಾರರಾಗೋಣ.
ಸಾಗರ್ ಎಲ್ ಎಂ ಹಚ್