ರಾಜ್ಯ ಸುದ್ದಿ

ಚುನಾವಣೆ ಹೊತ್ತಿನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ ಬಗ್ಗೆ ಚರ್ಚೆಯಾಗದ್ದು ವಿಷಾದನೀಯ : ನ್ಯಾ.ನಾಗಮೋಹನದಾಸ್

ಚುನಾವಣೆ ಹೊತ್ತಿನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ ಬಗ್ಗೆ ಚರ್ಚೆಯಾಗದ್ದು ವಿಷಾದನೀಯ : ನ್ಯಾ.ನಾಗಮೋಹನದಾಸ್

ಬೆಂಗಳೂರು :ದೇಶದಲ್ಲಿ ಪಾಳೆಗಾರಿಕೆ ತೆಗೆದು ಪ್ರಜಾಪ್ರಭುತ್ವವನ್ನ ಸ್ಥಾಪನೆ ಮಾಡಲಾಗಿದೆ. ಆದರೂ ಕಳೆದ 75 ವರ್ಷದಲ್ಲಿ ರಾಜಕೀಯ ಬಗ್ಗೆ ಪ್ರದಾನ ಚರ್ಚೆ ನಡೆದಿದೆಯೇ ಹೊರತು ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯದೆ ಇರುವುದು ವಿಷಾದಕರ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್‌. ನಾಗಮೋಹನದಾಸ್ ಅವರು ಅಭಿಪ್ರಾಯಪಟ್ಟರು.

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ (ಕೆಯುಡಬ್ಲ್ಯೂಜೆ ) ಶುಕ್ರವಾರ ‘ಚುನಾವಣೆ-ಪತ್ರಕರ್ತರು ಮತ್ತು ಸಾಮಾಜಿಕ ಜವಾಬ್ದಾರಿ’ ಎಂಬ ವಿಷಯದ ಬಗ್ಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.  ನಾವು ಮಾಡಿದ ದೊಡ್ಡ ತಪ್ಪು ಅಂದರೆ ಕೇವಲ ರಾಜಕೀಯ ಪ್ರಜಾಪ್ರಭುತ್ವದ ವಿಚಾರದ ಬಗ್ಗೆ ಮಾತ್ರ ಚರ್ಚೆ ಮಾಡುತ್ತಿದ್ದೇವೆ. ಆದರೆ ದೇಶದ ಸಂವಿಧಾನದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪ್ರಜಾಪ್ರಭುತ್ವ ಎಂಬ ಮೂರು ಅಂಶಗಳಿವೆ. ಉಳಿದವುಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿಲ್ಲ? ಎಂದು ಕೇಳಿದರು.

ಹಲವಾರು ಸಂದರ್ಭದಲ್ಲಿ ಬರೀ ರಾಜಕೀಯ ವಿಚಾರವೇ ಪ್ರಧಾನವಾಗಿದೆ. ರೈತರ ಆತ್ಮಹತ್ಯೆ, ಇಂಧನ ದರ ಏರಿಕೆ, ಮತ್ತಿತರ ದೈನಂದಿನ ವಿಚಾರಗಳು ಮುನ್ನಲೆಗೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಚುನಾವಣೆ ಹೊತ್ತಿನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ ಬಗ್ಗೆ ಚರ್ಚೆಯಾಗದ್ದು ವಿಷಾದನೀಯ : ನ್ಯಾ.ನಾಗಮೋಹನದಾಸ್

ಪ್ರಜಾಪ್ರಭುತ್ವದಲ್ಲಿ ಚುನಾವಣೆಯಲ್ಲಿ ಅರಿತು ನಾಗರೀಕರು ಮಾಧ್ಯಮಗಳಿಂದ ಮಾಹಿತಿ ಪಡೆದು ಜಾಗೃತರಾಗಿ ಮತದಾನ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಮಾಧ್ಯಮಗಳು ಜನರಿಗೆ ಚರ್ಚೆ ಮಾಡಲು, ಮಾಹಿತಿ ನೀಡಲು ಅನುಕೂಲ ಕಲ್ಪಿಸಿವೆ. ಚುನಾವಣೆ ಸಂದರ್ಭದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಬಿಕ್ಕಟ್ಟಯ, ರೈತರು, ಕಾರ್ಮಿಕರು, ಆರ್ಥಿಕತೆ, ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ಜನರು ಮತ್ತು ಸರ್ಕಾರದ ಮಧ್ಯೆ ಸೇತುವೆಯಂತೆ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಪ್ರತಿಯೊಬ್ಬರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಒಂದು ಲಕ್ಷ ರೂ. ನಂತೆ ವರ್ಷಕ್ಕೆ ಒಟ್ಟಾರೆ ರಾಜ್ಯದ ಜನರು ಏಳೂವರೆ ಲಕ್ಷ ಕೋಟಿ ರೂ. ನಂತೆ ತೆರಿಗೆ ಕಟ್ಟುತ್ತಾರೆ. ಆದರೆ ದುರ್ದೈವದ ಸಂಗತಿ ಎಂದರೆ ರಾಜ್ಯದ ಬಜೆಟ್ ಗಾತ್ರ ಎರಡೂವರೆ ಲಕ್ಷ ರೂ. ದಾಟಿಲ್ಲ. ಯಾವ ಪಕ್ಷವೂ ತನ್ನ ಪ್ರಣಾಳಿಕೆಯಲ್ಲಿ ಸಾಲ, ತೆರಿಗೆ ಮತ್ತು ಆರ್ಥಿಕತೆ ಬಗ್ಗೆ ವಾಸ್ತವ ತಿಳಿಸಿಲ್ಲ. ಜನರ ಅಭಿಪ್ರಾಯವನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ‌ ಮೇಲೆ ಒತ್ತಡ ಹಾಕುವ ಕೆಲಸ ಮಾಧ್ಯಮಗಳು ಮಾಡಬೇಕಿದೆ ಎಂದು‌ ನ್ಯಾ. ಎಚ್.ಎನ್‌. ನಾಗಮೋಹನದಾಸ್ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಬಿ.ಕೆ.ರವಿ, ಪತ್ರಕರ್ತರಾದವರು ತಮ್ಮ ಸ್ವಂತ ಜ್ಞಾನದ ಮೇಲೆ ಅವಲಂಬಿತರಾಗಿರಬೇಕೇ ವಿನಃ ತಂತ್ರಜ್ಞಾನದ ಮೇಲೆ ಅವಲಂಬಿತರಾಗಿರಬಾರದು. ಪರಿಶ್ರಮ, ಬದ್ಧತೆ ವೃತ್ತಿಗೆ ಮುಖ್ಯ ಎಂದು ಕಿವಿಮಾತು ಹೇಳಿದರು.

ಯಾವ ಮಾಧ್ಯಮ ಜನರ ನಂಬಿಕೆ ಉಳಸಿಕೊಳ್ಳುವುದೋ ಅಲ್ಲಿಯವರೆಗೆ ಆ ಮಾಧ್ಯಮ ಉಳಿದುಕೊಳ್ಳುವುದು. ಈ ನಿಟ್ಟಿನಲ್ಲಿ ಪತ್ರಕರ್ತರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.

ಪ್ರಜಾಪ್ರಭುತ್ವದ ಹಬ್ಬವಾದ ಈ ವಿಧಾನಸಭಾ ಚುನಾವಣೆಯಲ್ಲಿ ಜನರು ಹೆಚ್ಚು‌ ಮತದಾನ ಮಾಡುವ ಮೂಲಕ‌ ತಮ್ಮ ಹಕ್ಕು ಚಲಾಯಿಸಬೇಕು. ಆರೋಗ್ಯಕಾರಿ ಮಾಧ್ಯಮದಿಂದ ಆರೋಗ್ಯಕಾರಿ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ತಿಳಿಸಿದರು.

ಮೈಸೂರಿನಲ್ಲಿ‌ ನಡೆದ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಗದ ಕಾರಣ ಹಿರಿಯ ಪತ್ರಕರ್ತರಾದ ಮುಂಜಾನೆ ಸತ್ಯ ಅವರಿಗೆ ಪಿ.ಆರ್. ರಾಮಯ್ಯ ಹೆಸರಿನ ಪ್ರಶಸ್ತಿಯನ್ನು ಇಂದು ಪ್ರಧಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ಅವರು ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆ ಕೆಯುಡಬ್ಲ್ಯೂಜೆ ಸಂಘಟನೆಗೆ ಶಿವಾನಂದ ತಗಡೂರು ಅಧ್ಯಕ್ಷರಾದ ಮೇಲೆ ಹೊಸ ರೂಪ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಪತ್ರಕರ್ತ ಆದವರಿಗೆ ಬದ್ದತೆ ಮುಖ್ಯ ಎಂದು ತಮ್ಮ ಸುಧೀರ್ಘ ಪತ್ರಕರ್ತ ಜೀವನದ ಅನುಭವವನ್ನು ಹಂಚಿಕೊಂಡರು.

ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಕರ್ತರಿಗೆ ವಿಶ್ವಾಸಾರ್ಹತೆಯೇ ಮುಖ್ಯ. ಕೆಯುಡಬ್ಲ್ಯೂಜೆ ಸಂವಾದ ಸರಣಿ ರೂಪದಲ್ಲಿ ಮುಂದುವರಿಯಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಾರ್ತಾ ಇಲಾಖೆ ನಿರ್ದೇಶಕರಾದ ಡಿ.ಪಿ.ಮುರುಳೀಧರ್, ಉಪ ನಿರ್ದೇಶಕರಾದ ಕೆ.ಪಿ.ಪುಟ್ಟಸ್ವಾಮಯ್ಯ ಅವರ ಸುಧೀರ್ಘ ಸೇವೆಯನ್ನು ಸ್ಮರಿಸಿ ಕೆಯುಡಬ್ಲ್ಯುಜೆ ಇದೇ ಸಂದರ್ಭದಲ್ಲಿ ಸನ್ಮಾನಿಸಿತು.

ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಸ್ವಾಗತಿಸಿದರು.
ಖಜಾಂಚಿ ವಾಸುದೇವ ಹೊಳ್ಳ ವಂದಿಸಿದರು.

ಕೆಯುಡಬ್ಲ್ಯುಜೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಇಂದಿಗೆ ಒಂದು ವರ್ಷವಾಗಿರುವ ಸಂದರ್ಭದಲ್ಲಿ ಈ ರೀತಿಯಲ್ಲಿ ಸಂವಾದ
ಕಾರ್ಯಕ್ರಮ ಹಮ್ಮಿಕೊಂಡ ಬಗ್ಗೆ ಅತಿಥಿ ಗಣ್ಯರು ಶ್ಲಾಘಿಸಿದರು.

ಚುನಾವಣೆ ಹೊತ್ತಿನಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ ಬಗ್ಗೆ ಚರ್ಚೆಯಾಗದ್ದು ವಿಷಾದನೀಯ : ನ್ಯಾ.ನಾಗಮೋಹನದಾಸ್

ವಿಚಾರಧಾರೆ ಜನರಿಗೆ ತಲುಪಿಸುವ ಪತ್ರಿಕಾವಿತರಕರ ಪಾತ್ರದ ಬಗ್ಗೆ ಪಠ್ಯದಲ್ಲಿ ಸೇರಿಸಲು ಪರಿಶೀಲನೆ: ಬಿಕೆ ರವಿ

ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಿ.ಕೆ.ರವಿ ಅವರು ವಿತರಕರ ಪ್ರಶ್ನೆ ಬಗ್ಗೆ ಮಾತನಾಡಿ, ಇದೇ ಮೊದಲ ಬಾರಿಗೆ ವಿತರಕರ ಬಗ್ಗೆ ಪ್ರಶ್ನೆ ಬಂದಿದೆ. ಮುಂದೆ ಪತ್ರಿಕೋದ್ಯಮ ಪಾಠದಲ್ಲಿ ವಿತರಕರ ಪಾತ್ರದ ಬಗ್ಗೆ ಸೇರಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಪತ್ರಕರ್ತರ ಸಭಾಂಗಣದಲ್ಲಿ ‌ಚರ್ಚೆ ನಡೆಸುತ್ತಿದ್ದ ವೇಳೆ , ಪತ್ರಿಕಾ ವಿತರಕರ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಅವರು ಪ್ರಶ್ನೆ ಕೇಳಿದ್ದರು.
ಸುದ್ದಿಮನೆಯಲ್ಲಿ ವಿತರಕರಿಗೆ ಸರಿಯಾದ ಸ್ಥಾನ- ಮಾನ ಮತ್ತು ಸೌಲಭ್ಯ ಸಿಗುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದ್ದರು.

ಪತ್ರಕರ್ತರು ಕೊಟ್ಟ ವರದಿ ಪತ್ರಿಕೆಯಲ್ಲಿ ಪ್ರಕಟಗೊಂಡರೆ ಸಾಲದು. ಅದು ಜನರಿಗೆ ತಲುಪಿದಾಗ ಮಾತ್ರ ಅದರಲ್ಲಿರುವ ವಿಚಾರಧಾರೆ ಸಮಾಜಕ್ಕೆ ತಿಳಿಯಲು ಸಾದ್ಯ. ಆದ ಕಾರಣ ಪತ್ರಿಕಾ ವಿತರಕರ ಪಾತ್ರವೂ ಮಹತ್ವದ್ದು ಎಂದು ಶ್ಲಾಘಿಸಿದರು. ಅಲ್ಲದೆ ಇನ್ನು ಮುಂದೆ ಮಾಧ್ಯಮಕ್ಕೆ ಸಂಬಂಧಿಸಿದ ಕಾರ್ಯಕ್ರಮ ದಲ್ಲಿ ಭಾಗವಹಿದಾಗಲೆಲ್ಲಾ ಪತ್ರಿಕಾ ವಿತರಣಾ ವ್ಯವಸ್ಥೆ ಪ್ರಾಮುಖ್ಯತೆ ಕುರಿತು ಮಾತನಾಡುವ ಭರವಸೆಯನ್ನು ಅವರು ನೀಡಿದರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!