ಕ್ಯಾಲೆಂಡರ್ ಬದಲಾಗುವ ಸಮಯವಿದು
ಕಳೆದ 365 ದಿನಗಳುಹಾಗೆ ಹಿಂದೆ ತಿರುಗಿ ನೋಡಿದರೆ
ಒಂದಿಷ್ಟು ನಗು ಒಂದಿಷ್ಟು ಅಳು
ಸಾಗಬೇಕು ದಾರಿ ಬಂದಂತೆ
ಅಪರಿಚಿತರು ಪರಿಚಿತರಾದರು
ಪರಿಚಿತರು ಅಪರಿಚಿತರಾದರು
ಭಾವೆನೆಗಳು ಬದುಕಾದವು
ಬದುಕಿನಲ್ಲಿ ಬದಲಾವಣೆಗಳಾದವು
ಇನ್ನೇನು ಕಡಲು ಸಿಕ್ಕಿತೆಂಬ ಖುಷಿಯಲ್ಲಿ
ಒಂದಿಷ್ಟು ಸಂಬಂದಳು ಮುಳುಗಿದವು
ಕಂಬನಿಯ ಹೊರೆಸಿದ ಕೈಗಳು
ಕಣ್ಣಲ್ಲಿ ನೀರನ್ನು ಅರಿಸಿದವು
ಸಾಗುವ ಕಾಲದ ಜೊತೆ ಸಾಗುತ್ತಿದ್ದೇವೆ
ಸಂಬಂಧಗಳ ಸಡಿಲಿಕೆಯು ಅನಿವಾರ್ಯ
ತಪ್ಪಿಲ್ಲದಿದ್ದರು ಕ್ಷಮೆಯಾಚಿಸುವೆ ಕಾರಣ
ಬಿಟ್ಟು ಕೊಡುವ ಬಿಟ್ಟೋಗುವ ಮನಸಿಲ್ಲ
ಕಳೆದ ದಿನಗಳು ಕಣ್ಣು ಮುಂದೆ ಬರುತ್ತಿವೆ
ಕಣ್ಣಲ್ಲಿ ನೀರು ತುಂಬುತ್ತಿವೆ
ಯಾಕೆ ಈಗೆ ಎನ್ನುವ ಪ್ರೆಶ್ನೆಗಳು ಸಾವಿರ ಇವೆ
ಬದಲಾವಣೆ ಎನ್ನುವುದು ಬದುಕಿನಲ್ಲಿ ಅನಿವಾರ್ಯವಿದೆ
ದೂರಿ ದುರಾದವರು ದೂರವೇ ಉಳಿದುಬಿಡಿ
ಇಲ್ಯಾರೂ ಸ್ವಾಭಿಮಾನ ಬಿಟ್ಟಿಲ್ಲ
ಅರಸಿ ಆಶೀರ್ವದಿಸಿದ ಕೈಗಳು ಸದಾ ನನ್ನೊಂದಿಗಿರಲಿ
ಕೊನೆ ಉಸಿರಿರೋವರೆಗೂ ಋಣಿ ಆಗಿರುವೆ
✍️ ಸಿಂಧೂ ಎಮ್ ಸಿದ್ದಾಪುರ