ಲೋಕಲ್ ಸುದ್ದಿ

ಚುನಾವಣೆಯಲ್ಲಿ ಬಿಜೆಪಿ ಲಿಂಗಾಯತ ಹೆಸರು ಬಳಸುವುದೇ ತಪ್ಪು: ಡಾ.ಸಿದ್ಧನಗೌಡ ಪಾಟೀಲ್

ಚುನಾವಣೆಯಲ್ಲಿ ಬಿಜೆಪಿ ಲಿಂಗಾಯತ ಹೆಸರು ಬಳಸುವುದೇ ತಪ್ಪು: ಡಾ.ಸಿದ್ಧನಗೌಡ ಪಾಟೀಲ್

ದಾವಣಗೆರೆ: ಅಂಗಾಯತ ಧರ್ಮದ ವಿಷಯವನ್ನು ಬಿಜೆಪಿ ಪ್ರಧಾನವಾಗಿ ಚರ್ಚಿಸುತ್ತಿದೆ. ಅಂಗಾಯತರ ಗುತ್ತಿಗೆ ದಾರರಂತೆ ಬಿಜೆಪಿಯವರು ವರ್ತಿಸುತ್ತಿದ್ದಾರೆ. ವಾಸ್ತವದಲ್ಲಿ ಅಂಗಾಯತ ಧರ್ಮದ ಹೆಸರನ್ನು ಬಳಸುವುದೇ ತಪ್ಪು ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಹಾಗೂ ಅಖಿಲ ಭಾರತ ಕಿಸಾನ್ ಸಭಾದ (ಎ.ಐ.ಕೆ.ಎಸ್) ರಾಜ್ಯ ಅಧ್ಯಕ್ಷರಾದ ಡಾ.ಸಿದ್ಧನಗೌಡಪಾಟೀಲ್‌ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಣರು ತಾತ್ವಿಕವಾಗಿ ವೇದಗಳ ವಿರೋಧಿಗಳಾಗಿದ್ದರು. ಬಸವಣ್ಣನವರು ‘ವೇದಕ್ಕೆ ಹೊರೆಯ ಕಟ್ಟುವೆ’ ಎಂದು ಹೇಳಿದ್ದರು. ದೇವಾಲಯ ಸಂಸ್ಕೃತಿಯನ್ನ ಶರಣರು ಧಿಕ್ಕರಿಸಿ ಆತ್ಮಲಿಂಗವನ್ನು ಪೂಜಿಸಿಕೊಂಡರು. ದೇಹವೇ ದೇವಾಲಯವೆಂದರು. ಇಂತಹ ವೇದ ಸಂಸ್ಕೃತಿಯನ್ನು ಧಿಕ್ಕರಿಸಿದ ಅಂಗಾಯತ ಧರ್ಮವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ವೇದವನ್ನೇ ಪ್ರಧಾನವಾಗಿ ತನ್ನ ತಾತ್ವಿಕ ನೆಲೆಯನ್ನಾಗಿಸಿಕೊಂಡ, ದೇವಾಲಯವನ್ನೇ ರಾಜಕೀಯ ಅಸ್ತಮಾಡಿಕೊಂಡ, ಹಿಂದೂರಾಷ್ಟ್ರ ನಿರ್ಮಾಣವನ್ನೇ ತನ್ನ ಗುಲಿಯಾಗಿಸಿಕೊಂಡ ಬಿಜೆಪಿ ಅಂಗಾಯತವನ್ನು ರಾಜಕೀಯ ಅಸ್ತ್ರವನ್ನಾಗಿಸಿಕೊಂಡಿದೆ ಎಂದು ಆರೋಪಿಸಿದರು.

ವಾಸ್ತವವಾಗಿ ಜೆಪಿಯ ಮಾತೃ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್.ಎಸ್.ಎಸ್.) ಅಂಗಾಯತ ತತ್ವಗಳು ತದ್ವಿರುದ್ಧವಾಗಿವೆ. ಜೆಪಿಗೆ ಸಂವಿಧಾನಾತ್ಮಕವಾಗಿಯೂ, ತಾತ್ವಿಕವಾಗಿಯೂ ಅಂಗಾಯತವನ್ನು ತನ್ನ ರಾಜಕಾರಣಕ್ಕೆ ಬಳಸುವ ಹಕ್ಕಿಲ್ಲ ಎಂದರು.

ಪ್ರಧಾನ ಮಂತ್ರಿ ಮೋದಿಯವರು ಮತ್ತು ಗೃಹಮಂತ್ರಿ ಅಮಿತ ಷಾ ರವರು ಆರ್.ಎಸ್.ಎಸ್.ಹಾಗೂ ಕಾರ್ಪೋರೇಟ್ ಕಂಪನಿಗಳ ಅದರಲ್ಲೂ ಅದಾನಿ, ಅಂಬಾನಿಯ ನಿರ್ದೇಶನದಂತೆ ಆಡಳಿತ ನಡೆಸುತ್ತಾರೆಯೇ ಹೊರತು ಪ್ರಜಾಸತ್ತೆಯ ಜನಪ್ರತಿನಿಧಿಗಳಾಗಿ ಅಲ್ಲ. ಅವರು ಭಾರತದ ಸಂವಿಧಾನವನ್ನು ಬದಲಿಸಿ ಮನು ಸ್ಮೃತಿಯನ್ನು ಸಂವಿಧಾನವನ್ನಾಗಿಸುವ ಹುನ್ನಾರದಲ್ಲಿ ನಿರತರಾಗಿದ್ದಾರೆ. ಹಿಂದೂ ರಾಷ್ಟ್ರವೇ ನಮ್ಮ ಗುಲಿಯೆಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಒಂದೆಡೆ ಹಿಂದೂರಾಷ್ಟ್ರ ಇನ್ನೊಂದೆಡೆ ಕಾರ್ಪೋರೇಟ್ ಗುಲಾಮಗಿರಿ ಅವರ ಕಾರ್ಯಸೂಚಿಯಾಗಿವೆ. ಆ ಕಾರಣಕ್ಕಾಗಿಯೇ ಹಿಂದು-ಮುಸ್ಲಿಂ ಗಲಭೆಗಳನ್ನು ಹುಟ್ಟು ಹಾಕಿ ಜನರ ರಕ್ತದಲ್ಲಿ ಕಮಲ ಅರಳಿಸಿ ಅಧಿಕಾರ ಹಿಡಿಯುವ ಕ್ರಿಯೆಯಲ್ಲಿ ಸದಾ ನಿರತರಾಗಿದ್ದಾರೆ. ಆರ್.ಎಸ್.ಎಸ್.ನ ಸಿದ್ಧಾಂತಿ ಗೋಳ್ವಾಲ್ಕರ್ ಅವರಿಗೆ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ನಂಚಿಕೆ ಇರಲಿಲ್ಲ. ಆರ್.ಎಸ್.ಎಸ್. ಮತ್ತು ಅಂಬಿನ ಜನಸಂಘದ ಎಲ್ಲರೂ ಭಾಷಾವಾರು ಪ್ರಾಂತಕ್ಕೆ ವಿರುದ್ಧವಾಗಿದ್ದರು. ಹೀಗಾಗಿ ಅವರಾರು ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗವಹಿಸಲಿಲ್ಲ. ಈಗಲೂ ಒಂದು ಭಾಷೆ. ಒಂದು ರಾಷ್ಟ್ರದ ಗುಲಿ ಹೊಂದಿರುವ ಅವರು ಭಾರತದ ಏಕತೆಗೆ ಅಪಾಯಕಾರಿ ಶಕ್ತಿಯಾಗಿದ್ದಾರೆ.

ಈ ಸಲದ ಕರ್ನಾಟಕ ವಿಧಾನಸಭಾ ಚುನಾವಣೆ ರಾಜ್ಯದ ಪ್ರಜಾಸತ್ತೆ ಮತ್ತು ಸೌಹಾರ್ದತೆಯ ಅವು ಉಳವಿನ ಚುನಾವಣೆಯಾಗಿದೆ. ಮುಂದಿನ ವರ್ಷ 2024 ರಲ್ಲಿ ಲೋಕಸಭೆಗೂ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಆಡಳತ ಹಾಗೂ ವಿರೋಧ ಪಕ್ಷಗಳಿಗೆ ಈ ವಿಧಾನಸಭಾ ಚುನಾವಣೆ ಪ್ರತಿಷ್ಟೆಯ ಕಣವಾಗಿದೆ. ನಮ್ಮ ಸಂವಿಧಾನದ 326 ನೇ ಪರಿಚ್ಛೇದ ಮತಾಧಿಕಾರದ ಬಗ್ಗೆ ಮಾತನಾಡುತ್ತದೆ.. ಆದರೆ ಪ್ರಸ್ತುತ ಚುನಾವಣೆಗಳು ನಡೆಯುತ್ತಿರುವ ವಿಧಾನವನ್ನು ನೋಡಿದರೆ ಮತಾಧಿಕಾರ ವ್ಯವಹಾರವಾಗಿ ಪರಿವರ್ತನೆಯಾಗಿದೆ. ಆಡಳಿತ ಹಾಗೂ ವಿರೋಧಪಕ್ಷಗಳು ನಡೆಸುತ್ತಿರುವ ಚುನಾವಣಾ ಪೂರ್ವ ಪಕ್ಷಾಂತರಗಳು ನೀತಿರಹಿತ ರಾಜಕಾರಣವನ್ನು ಸಾಕ್ಷಿಕರಿಸುತ್ತವೆ.

ಚುನಾವಣೆಯಲ್ಲಿ ಧರ್ಮ, ಜಾತಿ, ಭಾಷೆ ಇಂತಹ ಅಸ್ಮಿತೆಗಳಿಂದ ರಾಜಕೀಯ ಪಕ್ಷಗಳು ದೂರವಿರಬೇಕೆಂದು ಸಂವಿಧಾನದ ನಿರ್ದೇಶನವಿದ್ದರೂ ಇಂದು ಜಾತಿ, ಧರ್ಮ,ಉಪಜಾತಿ ರಾಜಕಾರಣ ಈ ಚುನಾವಣೆಯಲ್ಲಿ ಪ್ರಧಾನ ಅಂಶವಾಗಿದೆ. ಜನರ ಮೂಲಭೂತ ಸಮಸ್ಯೆಗಳಾದ ಅನ್ನವಸತಿ, ನಿರುದ್ಯೋಗ, ಅನಾರೋಗ್ಯ, ಬೆಲೆ ಏಲಿಕೆ, ಭ್ರಷ್ಟಾಚಾರ ಇಂತಹ ಯಾವ ಸಂಗತಿಗಳು ಚುನಾವಣೆಯ ವಿಷಯವಾಗದೆ ಜಾತಿ, ಧರ್ಮದ ವಿಷಯಗಳೇ ಮುನ್ನಲೆಗೆ ಬರುತ್ತಿವೆ. ಇದು ಪ್ರಜಾಸತ್ತೆಯ ಅಣಕವಾಗಿದೆ.
ಈ ಸಲದ ಚುನಾವಣೆಯಲ್ಲಿ ಯಾರು ಅಧಿಕಾರಕ್ಕೆ ಬರುವವರು ಎನ್ನುವುದಕ್ಕಿಂತಲೂ ಯಾರು ಅಧಿಕಾರಕ್ಕೆ ಬರಬಾರದು ಎಂಬುದು ಮುಖ್ಯ.. ಜಾತಿ, ಧರ್ಮಗಳ ಮಧ್ಯೆ ಸಂಘರ್ಷ ಇತ್ತಿ, ರೈತ ಕಾರ್ಮಿಕ ರನ್ನು ಬೀದಿಪಾಲು ಮಾಡಿ ಕಾರ್ಪೋರೇಟ್ ಕಂಪನಿಗಳ ಹಿತಕಾಪಾಡುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯಮಂಡಆ ರಾಜ್ಯದ ಜನತೆಯನ್ನು ವಿನಂತಿಸುತ್ತದೆ. ಕಾಂಗ್ರೇಸ್ ಪಕ್ಷ ಮತ್ತು ಬಿಜೆಪಿಯ ಅರ್ಥಿಕ ನೀತಿಗಳಲ್ಲಿ ಅಂತಹ ವ್ಯತ್ಯಾಸ ಇಲ್ಲದಿದ್ದರೂ ಮತಾಂಧರ ರಾಜಕಾರಣವನ್ನು ತಡೆಯಲು ರಾಜ್ಯದ 215 ಮತ ಕ್ಷೇತ್ರಗಳಲ್ಲಿ ಸಿಪಿಐ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತದೆ. ಉಳಿದ ಕ್ಷೇತ್ರಗಳಲ್ಲಿ ಸಿಪಿಐ ಮತ್ತು ಮಿತ್ರ ಪಕ್ಷಗಳು ಸ್ಪರ್ಧಿಸಿವೆ. ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಅದರ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟಿಸಬಹುದು.ಆದರೆ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬಂದರೆ ಜನತೆ,ವಿರೋಧಪಕ್ಷಗಳು ಪ್ರತಿಭಟನೆ ಮಾಡುವ ಹಕ್ಕನ್ನೇ ಕಳೆದುಕೊಳ್ಳುತ್ತವೆ. ಪ್ರತಿಭಟನಾಕಾರರನ್ನು ದೇಶದ್ರೋಹಿಗಳೆಂದು ಬಿಜೆಪಿ ಪರಿಗಣಿಸುತ್ತದೆ. ಸೌಹಾರ್ದ, ಸ್ವಾವಲಂಬನೆಯ ಕರ್ನಾಟಕದಲ್ಲಿ ಬಿಜೆಪಿ ಯನ್ನು ಸೋಲಿಸಬೇಕಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆವರಗೆರೆ ಚಂದ್ರು, ಹೆಚ್.ಜಿ. ಉಮೇಶ್, ಆವರಗೆರೆ ವಾಸು, ಆನಂದರಾಜ್, ಟಿ.ಎಸ್. ನಾಗರಾಜ್, ಐರಣಿ ಚಂದ್ರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top