ಮಾ 17 ಕ್ಕೆ ಜೇಮ್ಸ್ ಚಿತ್ರ ಪ್ರದರ್ಶನ – ಅಪ್ಪು ಕಟೌಟ್ ಗೆ ಹಾಲಿನ ಅಭಿಷೇಕ, 47 ಆಟೋಗಳ ಮೇಲೆ ಪುನೀತ್ ಕಟೌಟ್.!

ದಾವಣಗೆರೆ: ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟ, ಅಖಿಲ ಕರ್ನಾಟಕ ಡಾ. ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ರಾಜರತ್ನ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಜೇಮ್ಸ್ ಅಪ್ಪು ಉತ್ಸವದ ಪ್ರಯುಕ್ತ ಮಾರ್ಚ್ 17 ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟ ಅಧ್ಯಕ್ಷ ಯೋಗೀಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಂದು ಬೆಳಿಗ್ಗೆ 7.30 ಕ್ಕೆ ನಿಟುವಳ್ಳಿ ಶ್ರೀ ದುರ್ಗಾಂಬಿಕಾ  ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ನಂತರ ಪುನೀತ್ ರಾಜಕುಮಾರ್ 47ನೇ ಹುಟ್ಟುಹಬ್ಬದ ನೆನಪಿಗಾಗಿ 47 ಆಟೋಗಳ ಮೇಲೆ ಪುನೀತ್ ಅವರ ಚಿತ್ರಗಳಿಗೆ ಸಂಬಂಧಿಸಿದ ಕಟೌಟ್ ಗಳನ್ನು ಇರಿಸಿ ವಸಂತ ಚಿತ್ರಮಂದಿರದವರೆಗೆ ಮೆರವಣಿಗೆ ನಡೆಸಲಾಗುವುದು ಎಂದರು. ಮೆರವಣಿಗೆಯು ದೇವಸ್ಥಾನದಿಂದ ಆರಂಭವಾಗಿ, ಇಎಸ್ಐ ಐ ಆಸ್ಪತ್ರೆ ಮಾರ್ಗವಾಗಿ, ಜಯದೇವ ವೃತ್ತ, ರೈಲ್ವೇ ಸ್ಟೇಷನ್ ನಿಂದ ಅಂಡರ್ ಬ್ರಿಡ್ಜ್ ಮಾರ್ಗವಾಗಿ ಮೆರವಣಿಗೆ ಸಾಗಿ ಚಿತ್ರಮಂದಿರ ತಲುಪಲಿದೆ ಎಂದರು.

ಮಾ.17 ರ ಬೆಳಿಗ್ಗೆ 10 ಗಂಟೆಗೆ ಚಿತ್ರಮಂದಿರದಲ್ಲಿ ಅಪ್ಪು ಕಟೌಟ್ ಗೆ ಹಾಲಿನ ಅಭಿಷೇಕ ನೆರವೇರಿಸಲಾಗುವುದು. ನಂತರ ಪುಷ್ಪಾರ್ಚನೆ ಮಾಡಿ, ಕೇಕ್ ಕತ್ತರಿಸಿ, ಅಭಿಮಾನಿಗಳಿಗೆ ಸಿಹಿ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ವೈ. ಭಾಗ್ಯಾದೇವಿ, ಜಿ. ಹರೀಶ್, ಶ್ರೀನಿವಾಸ್  ಗುಮ್ಮನೂರು, ರಾಜೇಶ್ ಹಾಗೂ ಎನ್. ನಾಗರಾಜ್ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!