ಕಾಶ್ಮೀರ್ ಫೈಲ್ಸ್ ನೊಂದಿಗೆ ಜೇಮ್ಸ್ ವಾರ್! ಬಿಜೆಪಿ-ಕಾಂಗ್ರೆಸ್ ವಾಕ್ಸಮರ
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅಪ್ಪು ಕೊನೆ ಸಿನಿಮಾ ಸುಮಾರು ನಾಲ್ಕು ಸಾವಿರ ಸ್ಕ್ರಿನ್ಗಳಲ್ಲಿ ‘ಜೇಮ್ಸ್’ ಸಿನಿಮಾ ತೆರೆ ಕಂಡಿತ್ತು. ಭಾರಿ ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಹಲವಾರು ಥಿಯೇಟರ್‌ಗಳಲ್ಲಿ ಕೆಲವರಿಗೆ ಸಿನಿಮಾ ನೋಡಲು ಸಾಧ್ಯವಾಗದಷ್ಟು ಸಿನಿಮಾ ಓಡುತ್ತಿದೆ. ಹೌಸ್ ಫುಲ್ ಆಗಿದೆ. ಆದರೀಗ ‘ಕಾಶ್ಮೀರ್ ಫೈಲ್ಸ್’ ಸಿನಿಮಾಕ್ಕಾಗಿ ಅಪ್ಪು ಸಿನಿಮಾ ‘ಜೇಮ್ಸ್’ ಅನ್ನು ಥಿಯೇಟರ್‌ಗಳಲ್ಲಿ ಕಡೆಗಣಿಸಲಾ ಗುತ್ತಿದೆ. ಹೀಗಾಗಿ ಕೆಲ ಸಿನಿಮಾ ಮಂದಿರಗಳಲ್ಲಿ ಜೇಮ್ಸ್ ಚಿತ್ರವನ್ನು ತೆಗೆಯಲಾಗಿದೆ, ‘ಕಾಶ್ಮೀರ್ ಫೈಲ್ಸ್’ ಪ್ರಸಾರ ಮಾಡಲು ಒತ್ತಡ ಹೆಚ್ಚಾಗುತ್ತಿದೆ ಎನ್ನುವ ಗಂಭೀರ ಆರೋಪ ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ.
ಕಾಶ್ಮೀರ್ ಫೈಲ್ಸ್’ ಸಿನಿಮಾ ‘ಜೇಮ್ಸ್’ ಓಟಕ್ಕೆ ಅಡ್ಡಿಯಾಗುತ್ತಿದೆ ಎಂಬ ಆರೋಪ ರಾಜ್ಯದೆಲ್ಲೆಡೆ ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ ನೀಡಿದ ಮೇಲೂ ರಾಜ್ಯದಲ್ಲಿ ಈ ಬಗ್ಗೆ ವಾಕ್ಸಮರ ಮುಂದುವರೆದಿದೆ. ಈ ಎರಡೂ ಸಿನಿಮಾಗಳ ನಡುವೆ ರಾಜಕೀಯ ಕದನ ಶುರುವಾಗಿದೆ. ‘ಜೇಮ್ಸ್’ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಥಿಯೇಟರ್‌ಗಳಲ್ಲಿ ಪ್ರಸಾರ ಮಾಡುವಂತೆ ಬಿಜೆಪಿ ಹುನ್ನಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಹೀಗಾಗಿ ಕಾಶ್ಮೀರ್ ಫೈಲ್ಸ್ ವಿರುದ್ಧ ಜೇಮ್ಸ್ ವಾರ್ ನಡೆದಿದೆ.ಕಾಶ್ಮೀರ್ ಫೈಲ್ಸ್ ಚಿತ್ರಕ್ಕಾಗಿ ಜೇಮ್ಸ್ ಎತ್ತಂಗಡಿ ಮಾಡುತ್ತಿದ್ದಾರೆ. ಇದರಿಂದಾಗಿ ಒತ್ತಡ ಹಾಕುತ್ತಿದ್ದಾರೆ ಎಂದು ನಿರ್ಮಾಪಕ ಕಿಶೋರ್ ಆರೋಪ ಮಾಡಿದ್ದಾರೆ. ನಿರ್ಮಾಪಕ ಕಿಶೋರ್ ಗಂಭೀರ ಆರೋಪದ ಬೆನ್ನಲ್ಲೇ ಈ ಕಿಚ್ಚು ಹೆಚ್ಚಾಗಿದೆ. ಮಾತ್ರವಲ್ಲದೇ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕೂಡ ಇದೇ ಆರೋಪವನ್ನು ಮಾಡಿದ್ದಾರೆ.
ಅಪ್ಪು ಅಭಿನಯದ ಕಡೆಯ ಸಿನಿಮಾ ‘ಜೇಮ್ಸ್’. ಹೀಗಾಗಿ ಈ ಚಿತ್ರ ಸಾಕಷ್ಟು ಜನ ಮನ್ನಣೆ ಪಡೆದುಕೊಂಡಿದೆ. ಆದರೆ ಈ ಸಿನಿಮಾ ಬದಲಿಗೆ ಥಿಯೇಟರ್‌ನಲ್ಲಿ ಬೇರೆ ಸಿನಿಮಾ ಮುಂದುವರೆಸುವ ಹುನ್ನಾರದ ಆರೋಪವನ್ನು ವಿತರಕ ಕೆವಿ ಚಂದ್ರಶೇಖರ್ ತಳ್ಳಿ ಹಾಕಿದ್ದಾರೆ. ಸಿನಿಮಾವನ್ನು ಥಿಯೇಟರ್‌ಗಳಲ್ಲಿ ಉಳಿಸಿಕೊಳ್ಳುವುದು ನಿರ್ಮಾಪಕರಿಗೆ ಬಿಟ್ಟ ವಿಚಾರ ಎಂದು ಅವರು ಹೇಳಿಕೊಂಡಿದ್ದಾರೆ. ಒಂದೆಡೆ ನಾಳೆ ಆರಂಭಗೊಳ್ಳುತ್ತಿರುವ ಥ್ರಿಬಲ್ ಆರ್ ಸಿನಿಮಾ ಜೇಮ್ಸ್ಗೆ ಅಡ್ಡಿಯಾಗುತ್ತಾ ಅನ್ನೋ ಆತಂಕವಿದ್ದರೆ, ಇತ್ತ ಜೇಮ್ಸ್ ತೆರವುಗೊಳಿಸಿದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಅಪ್ಪು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಈ ವಿಚಾರವಾಗಿ ಮೊದಲು ಬಾಂಬ್ ಹಾಕಿದ್ದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು. ‘ಕಾಶ್ಮೀರ್ ಫೈಲ್ಸ್’ ಸಿನಿಮಾಕ್ಕಾಗಿ ಬಿಜೆಪಿ ಜೇಮ್ಸ್ ಸಿನಿಮಾವನ್ನು ಥಿಯೇಟರ್‌ನಿಂದ ತೆಗೆದು ಹಾಕುವಂತೆ ವಿತರಕರಿಗೆ ಒತ್ತಡ ಹೇರುತ್ತಿದೆ. ಇದಕ್ಕಾಗಿ ಎಂಎಲ್‌ಎ, ಸಚಿವರು ಥಿಯೇಟರ್ ಖಾಲಿ ಮಾಡ್ಸಿ ಎನ್ನುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಆದರೆ ಇದಕ್ಕೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ‘ಅನವಶ್ಯಕವಾಗಿ ಸಿನಿಮಾ ತೆಗೆಯಲ್ಲ. ಅದನ್ನು ಥಿಯೇಟರ್‌ಗಳಲ್ಲಿ ಉಳಿಸಿಕೊಳ್ಳಲು ಸಂಬಂಧಪಟ್ಟ ವಿತರಕರು, ನಿರ್ಮಾಪಕರಿಗೆ ಹಕ್ಕಿದೆ. ಈ ಬಗ್ಗೆ ನಾನು ಶಿವರಾಜಕುಮಾರ್ ಜೊತೆ ಮಾಡಿದ್ದೇನೆ. ಕಾಂಗ್ರೆಸ್ ಸಿನಿಮಾ ವಿಚಾರವಾಗಿ ರಾಜಕೀಯ ಮಾಡುತ್ತಿದೆ ಅಂದರೆ ಅವರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಜನ ಯೋಚಿಸಬೇಕು’ ಎಂದರು. ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್. ವಿಶ್ವನಾಥ್ ‘ಕಾಶ್ಮೀರ್ ಫೈಲ್ಸ್ ಸಿನಿಮಾ ಹಾಕಲಿ ಬೇಡ ಅನ್ನೋದಿಲ್ಲ. ಒಂದು ಸಿನಿಮಾವನ್ನು ತೆಗೆದು ಇನ್ನೊಂದು ಸಿನಿಮಾ ಹಾಕಿದ್ರೆ ಜನ ರೊಚ್ಚಿಗೇಳುತ್ತಾರೆ’ ಎಂದಿದ್ದಾರೆ.