ಲೋಕಲ್ ಸುದ್ದಿ

ಚಿತ್ರದುರ್ಗ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ಅಬ್ಬರದ ಪ್ರಚಾರ

ಚಿತ್ರದುರ್ಗ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ಅಬ್ಬರದ ಪ್ರಚಾರ

ಚಿತ್ರದುರ್ಗ: ಚಿತ್ರದುರ್ಗ ನಗರದ 1 & 2 ನೇ ವಾರ್ಡ್ ವ್ಯಾಪ್ತಿಯ ಜೋಗಿಮಟ್ಟಿ ರಸ್ತೆ, ಜಟ್ ಪಟ್ ನಗರ, ಕಾಮನಬಾವಿ ಬಡಾವಣೆಗಳಲ್ಲಿ ರೋಡ್ ಶೋ ಮೂಲಕ ಗಮನ ಸೆಳೆದ ರಘು ಆಚಾರ್ ಸ್ಥಳೀಯ ನಿವಾಸಿಗಳ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಚಿತ್ರದುರ್ಗ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ಅಬ್ಬರದ ಪ್ರಚಾರ
ಪ್ರಚಾರದ ವೇಳೆ ಮತದಾರರ ಬಳಿ ಮನವಿ ಮಾಡಿ ಚಿತ್ರದುರ್ಗದಲ್ಲಿ ನಡೆಯುತ್ತಿರು ಲಂಚದ ಹಾಬಳಿ, ಕಮಿಷನ್ ದಂಧೆ, ಜೂಜಾಟದ ಅಡ್ಡೆಗಳಿಗೆ ಕಡಿವಾಣ ಕಾಕಿ, ಮಕ್ಕಳ ಉತ್ತಮವಾದ ಭವಿಷ್ಯ ರೂಪಿಸಲು ಬೇಕಾದ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತೇನೆ, ಬಡವರಿಗೂ ಹೈಟೆಕ್ ಆರೋಗ್ಯ ಸೇವೆ ಸಿಗುವಂತೆ ನೋಡಿಕೊಳ್ಳುತ್ತೇನೆ, ಕುಮಾರಣ್ಣ ಅವರು ಮಹಿಳೆಯರು, ಮಕ್ಕಳು, ವೃದ್ದರು, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ, ಅವರು ನೀಡಿರುವ ಪ್ರಣಾಳಿಕೆಯ ಎಲ್ಲಾ ಅಂಶಗಳ ಜೊತೆಗೆ, ಚಿತ್ರದುರ್ಗ ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಕನಸಿನ ಪ್ರಣಾಳಿಕೆನ್ನು ನೀಡಿದ್ದೇನೆ, ನಾನು ಎರಡು ಬಾರಿ ಎಂಎಲ್ ಸಿ ಆಗಿದ್ದಾಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ, ಇಂದೊಂದು ಬಾರಿ ನನಗೆ ಅವಕಾಶ ಕೊಟ್ಟು ನೋಡಿ, ಕುಮಾರಣ್ಣ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದೇ ಬರುತ್ತದೆ, ನಾನೇ ಮುಂದೆ ನಿಂತು ನಿಮ್ಮ ಕನಸಿನ ಚಿತ್ರದುರ್ಗದ ನವನಿರ್ಮಾಣ ಮಾಡುತ್ತೇನೆ ಎಂದು ಭರವಸೆ ನೀಡಿದರು. ಪ್ರಚಾರದ ವೇಳೆ ಅಪಾರ ಬೆಂಬಲಿಗರು, ಜೆಡಿಎಸ್ ಕಾರ್ಯಕರ್ತರು, ಭಾಗವಹಿಸಿದ್ದರು..

Click to comment

Leave a Reply

Your email address will not be published. Required fields are marked *

Most Popular

To Top