ಜೆಡಿಎಸ್ ಅಭ್ಯರ್ಥಿ ಉತ್ತರದಲ್ಲಿ ಮತಯಾಚನೆ

ಜೆಡಿಎಸ್ ಅಭ್ಯರ್ಥಿ ಉತ್ತರದಲ್ಲಿ ಮತಯಾಚನೆ

ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಾತಿ ಶಂಕರ್ ಭಾನುವಾರ ಶಾಮನೂರು, ಹೊಸ ಕುಂದುವಾಡ, ಹಳೆ ಕುಂದುವಾಡದಲ್ಲಿ ಮತಯಾಚನೆ ಮಾಡಿದರು.

ಪ್ರತಿ ಮನೆಮನೆಗೂ ತೆರಳಿದ ಬಾತಿ ಶಂಕರ್ ಅವರು ವೃದ್ಧರಿಗೆ, ವಿಕಲಚೇತನರು, ರೈತರು, ಮಹಿಳೆಯರಿಗೆ ಎಚ್.ಡಿ ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಗಳನ್ನು ತಿಳಿಸಿದರು.

ಇದೇ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಅಬ್ಬರದ ಪ್ರಚಾರದಿಂದ ಮತದಾರರ ಮನಗೆಲಲ್ಲು ಸಾಧ್ಯವಿಲ್ಲ. ಈ ಬಾರಿ ಮತದಾರರು ಜೆಡಿಎಸ್‌ಗೆ ಒಲಿಯಲಿದ್ದಾರೆ. ತಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಪ್ಪ, ರೇಖಾ ಸಿಂಗ್, ರವೀಂದ್ರ ತೊಗೋಶೆಟ್ಟಿ, ಮುದೇನೂರು ಮಧು, ಅಮರೇಶ್, ಪ್ರಶಾಂತ್, ವಿಜಯಸ್ವಾಮಿ ಗೌಡ, ವೀರೇಶ್, ಗ್ರಾಮಸ್ಥರಾದ ಬಸಪ್ಪ, ಹನುಮಂತ, ರಾಮಣ್ಣ, ಮಂಜುನಾಥ, ದ್ಯಾಮಣ್ಣ ಇತರರು ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!