ಜೆ.ಇ.ಇ ಪ್ರಶ್ನೆ ಪತ್ರಿಕೆ ಬಹಿರಂಗ: ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯ – ಎನ್.ಎಸ್.ಯು.ಐ
ದಾವಣಗೆರೆ: ಜೆ.ಇ.ಇ ಯಂತಹ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಬಹಿರಂಗವಾಗಿ ವಾರ ಕಳೆದರು ಅದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಎನ್.ಎಸ್.ಯು.ಐ ಮುಖಂಡ ಶಶಿಧರ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಇಂಜನಿಯರಿಂಗ್ ಪದವಿ ಪಡೆಯಬೇಕು ಉನ್ನತ ವ್ಯಾಸಂಗ ಮಾಡಬೇಕು ಉತ್ತಮ ಕೆಲಸಕ್ಕೆ ಹೋಗಬೇಕು ಎಂದು ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ಇಂಜನಿಯರಿಂಗ್ ಪ್ರವೇಶ ಪರೀಕ್ಷೆ ಬರೆಯುತ್ತಾರೆ ಅದರೆ ಜೆ.ಇ.ಇ.ಪ್ರಮುಖ ಪ್ರಶ್ನೆ ಪತ್ರಿಕೆ ಬಹಿರಂಗವಾಗಿ ಮಾರಾಟವಾಗುತ್ತಿದೆ ಇದ್ದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆನಾನುಕೂಲವಾಗಲಿದೆ.
ಪ್ರಶ್ನೆ ಪತ್ರಿಕೆ ಬಹಿರಂಗವಾಗಿರುವುದರಕ್ಕೆ ಉನ್ನತ ಶಿಕ್ಷಣ ಸಚಿವರು ರಾಜಿನಾಮೆ ನೀಡಬೇಕು ಪ್ರಶ್ನೆ ಪತ್ರಿಕೆ ಬಹಿರಂಗದಲ್ಲಿ ಕೈವಾಡವಿರುವ ವ್ಯಕ್ತಿಗಳ ವಿರುದ್ದ ಸೂಕ್ತ ತನಿಖೆಯಾಗಬೇಕು ಮತ್ತು ಮುಂದಿನ ದಿನಗಳಲ್ಲಿ ಈ ರೀತಿ ತಪ್ಪು ನಡೆಯದಂತೆ ಎಚ್ಚರವಹಿಸಬೇಕು ಎಂದು ಉಪವಿಭಾಗಧಿಕಾರಿಗಳ ಪತ್ರ ನೀಡುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎನ್.ಎಸ್.ಯು.ಐ ಮುಖಂಡರುಗಳಾದ ಶಶಿಧರ್ ಪಾಟೀಲ್, ಮನೋಜ್ ಕುಮಾರ್ ಎಚ್.ಎಮ್, ಅಣ್ಣೇಶ್ ಎಚ್ , ಮೊಹಮ್ಮದ್ ಜಕ್ರಿಯ ಸುರೇಶ್ ಜಾದವ್ ಮಹಬೂಬ್ ಬಾಷಾ,ಅಮೀನ್ ಬಿ,ಮೊಹಮ್ಮದ್ ಜುನೇದ್
ಮೊಹಮ್ಮದ್ ತಬರೇಜ್ ,ಕಾರ್ತಿಕ್ ಬಿ,ಮಾಲ್ತೇಶ್ ಜಿ
ಗಿರೀಶ್ ಜೆ,ವಿಜಯಾನಂದ ಪಿ,ಮೈಲಾರಿ,ಮಲ್ಲೇಶ್ ಎಚ್ ಹಾಗು ಹಲವು ವಿದ್ಯಾರ್ಥಿಗಳು ಹಾಜ್ಜರಿದ್ದರು.