Jjmmc pg dr stipend: ಗೃಹ ವೈದ್ಯರಿಗೆ ಶಿಷ್ಯವೇತನ ನೀಡದೇ ಮುಷ್ಕರ ಮಾಡುವಂತೆ ಕಾಲೇಜಿನ ಆಡಳಿತ ಮಂಡಳಿ ಮಾಡುತ್ತಿದೆ – ಸಂಸದ ಜಿ.ಎಂ. ಸಿದ್ದೇಶ್ವರ್

ದಾವಣಗೆರೆ: ಜಿಲ್ಲಾ ಆಸ್ಪತ್ರೆಯನ್ನು ಬಳಸಿಕೊಳ್ಳುವವರೆಗೂ ಜೆಜೆಎಂ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯೇ ಗೃಹ ವೈದ್ಯರು, ಕಿರಿಯ ವೈದ್ಯರಿಗೆ ಶಿಷ್ಯವೇತನ ನೀಡಬೇಕು ಎಂಬುದಾಗಿ ಸರ್ಕಾರ ಸ್ಪಷ್ಟವಾಗಿ ತಿಳಿಸಿದ್ದು, ಇದರ ಬಗ್ಗೆ ಒಪ್ಪಂದವಾಗಿದೆ. ಆದರೆ, ಗೃಹ ವೈದ್ಯರಿಗೆ ಶಿಷ್ಯವೇತನ ನೀಡದೇ ಅವರನ್ನು ಮುಷ್ಕರ ಮಾಡುವಂತೆ ಕಾಲೇಜಿನ ಆಡಳಿತ ಮಂಡಳಿ ಮಾಡುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರು ದಿನಗಳ ಕಾಲ ನಗರದಲ್ಲಿ ಗೃಹವೈದ್ಯರು ನಡೆಸಿದ ಮುಷ್ಕರ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದೇಶ್ವರ್, ಗೃಹ ವೈದ್ಯರಿಗೆ ಸ್ಟೈಫಂಡ್ ನೀಡದಿರುವುದು ಕಾಲೇಜು ಆಡಳಿತ ಮಂಡಳಿಯ ತಪ್ಪು. ಕಾಲೇಜಿನವರಿಗೆ ಸರ್ಕಾರವೇ ಮಾತನಾಡಿ, ಶಿಷ್ಯವೇತನ ನೀಡಲು ಸೂಚಿಸಿದೆ. ಹಿಂದಿನ ಸಲ ಸರ್ಕಾರ ಕೊಟ್ಟಿದೆ. ಮುಂದಿನ ಸಲದಿಂದ ಕಾಲೇಜಿನವರೇ ನೀಡಬೇಕೆಂದು ಕೊಡಬೇಕೆಂಬ ಸೂಚನೆ ಸಹ ನೀಡಲಾಗಿತ್ತು. ಆದರೂ ಆಡಳಿತ ಮಂಡಳಿ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ ಎಂದು ಆಪಾದಿಸಿದರು.

ಗೃಹ ವೈದ್ಯರ ಸಮಸ್ಯೆ ನನಗೆ ಅರ್ಥವಾಗುತ್ತದೆ. ಹಿಂದೆಯೂ ಶಿಷ್ಯವೇತನಕ್ಕೆ ಒತ್ತಾಯಿಸಿ ಹೋರಾಟ ನಡೆಸಿದಾಗ ನಾನು, ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಭೈರತಿ ಸ್ಥಳಕ್ಕೆ ಹೋಗಿ, ಕಿರಿಯ ವೈದ್ಯರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೆವು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!