ಮಾ.22 ರಂದು ಉದ್ಯೋಗ ಮೇಳ
ದಾವಣಗೆರೆ : ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್ ದಾವಣಗೆರೆ ಇವರ ವತಿಯಿಂದ ಮಾ.22 ರಂದು ಯು.ಬಿ.ಡಿ.ಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಇಲ್ಲಿ ನಡೆಯಲಿರುವ ಉದ್ಯೋಗ ಮೇಳದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಜಿಲ್ಲೆಯ ಯುವಕ-ಯುವತಿಯರು ಭಾಗವಹಿಸಲು ಗೂಗಲ್ ಪೋರಂ ಲಿಂಕ್ https://tinyurl.com/bdafha6m ನಲ್ಲಿ ಮಾಹಿತಿಯನ್ನು ಭರ್ತಿಗೊಳಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ 8971749636 ಹಾಗೂ ಇಮೇಲ್ ವಿಳಾಸ dsmodvg@gmail.com ಅಥವಾ ಜಿಲ್ಲಾಡಳಿತ ಭವನ, 1ನೇ ಮಹಡಿ, ಕೊಠಡಿ ಸಂಖ್ಯೆ 24, ಬಿ ಬ್ಲಾಕ್, ಪಿ.ಬಿ ರಸ್ತೆ ದಾವಣಗೆರೆ ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗಿರೀಶ್ ಕೆ.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.