ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಸಾರ್ವಜನಿಕ ಶಿಕ್ಱಣ ಇಲಾಖೆಯ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕೆ.ಟಿ. ನಿಂಗಪ್ಪ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕನಕ ಸಮೂಹ ಸಂಸ್ಥೆಯ ಸಂಸ್ಥಾಪಕರು ಹಾಗೂ ಸ್ವಯಂ ನಿವೃತ್ತ ಶಿಕ್ಷಕರೂ ಆದ ಅಣಬೇರು ಶಿವಮೂರ್ತಿ ಅವರು ವಿಘ್ನೇಶ್ವರನ ಪ್ರತಿಮೆಯನ್ನು ನೀಡಿ ಅಭಿನಂದಿಸಿದರು.
ಚನ್ನಗಿರಿ ತಾಲ್ಲೂಕಿನ ದೊಡ್ಡಮಲ್ಲಾಪುರ ಗ್ರಾಮದ ವಾಸಿಯಾದ ಇವರು, ಕೆಇಎಸ್ ಪದವಿ ಪಡೆದು, ಸಾಗರ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿ, ಚನ್ನಗಿರಿ ತಾಲ್ಲೂಕು ಕಂಚಿಗನಾಳು ಗ್ರಾಮದ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ, ಚನ್ನಗಿರಿ ತಾಲ್ಲೂಕಿನಲ್ಲಿ ಅಕ್ಷರ ದಾಸೋಹ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ನಂತರ ಹರಪನಹಳ್ಳಿ ಮತ್ತು ಚನ್ನಗಿರಿ ತಾಲ್ಲೂಕುಗಳಲ್ಲಿ ಬಿಆರ್‌ಸಿ ಆಗಿ ನಂತರ ದಾವಣಗೆರೆ ಡಯಟ್‌ನಲ್ಲಿ ಉಪನ್ಯಾಸಕರಾಗಿ ಹಾಗೂ ಸಾಗರ ತಾಲ್ಲೂಕಿನ ಬಿಇಓ ಆಗಿ ಕರ್ತವ್ಯ ನಿರ್ವಹಿಸಿದ್ದರು. ಈಗ ಹರಿಹರದ ನೂತನ ಬಿಇಓ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
