ರೌಡಿ ಶೀಟರ್ ಫಯಾಜ್ ಜೊತೆ ಕಾಗೇರಿ ಸಭೆ: ಫೋಟೋ ವೈರಲ್
ಶಿರಸಿ: ರೌಡಿ ಶೀಟರ್ ಫಯಾಜ್ ಚೌಟಿ ಜೊತೆಗೆ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇತ್ತೀಚಿಗೆ ಸಭೆ ನಡೆಸಿದ್ದಾರೆಯೇ?
ಇಂತಹದ್ದೊಂದು ಫೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ಚೌಟಿ ಸದ್ಯ ದರೋಡೆ, ಬ್ಲಾಕ್ ಮೇಲ್, ಅಪಹರಣ ಸೇರಿದಂತೆ ಹಲವು ಪ್ರಕರಣದ ಆರೋಪಿಯಾಗಿದ್ದಾನೆ.
ಫಯಾಜ್ ಚೌಟಿ ಭೂಗತ ಪಾತಕಿ ಹೆಬ್ಬೆಟ್ಟು ಮಂಜ ಸೇರಿದಂತೆ ಅನೇಕರೊಂದಿಗೆ ಸಂಪರ್ಕದಲ್ಲಿದ್ದಾನೆ. ಆದರೆ, ಐದು ದಿನಗಳ ಹಿಂದೆ ಚೌಟಿ ಸ್ಪೀಕರ್ ಕಾಗೇರಿ ಪಕ್ಕದಲ್ಲೇ ಕುಳಿತು ಸಭೆ ನಡೆಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಕ್ಷೇತ್ರದ ಯಾವುದೋ ಸಮಸ್ಯೆ ಇಟ್ಟುಕೊಂಡು ರೌಡಿ ಶೀಟರ್ ಚೌಟಿ ಬಳಿ ಚರ್ಚೆಗೆ ಬಂದಿದ್ದರು ಎಂದು ಕಾಗೇರಿ ಕಚೇರಿ ಮೂಲಗಳು ತಿಳಿಸಿವೆ. ಆದರೆ, ಚುನಾವಣೆ ಸಂದರ್ಭದಲ್ಲಿ ಆಪ್ತನಂತೆ ಕಾಗೇರಿ ಅಕ್ಕಪಕ್ಕದಲ್ಲಿಯೇ ಕುಳಿತು ಚೌಟಿ ಸಭೆ ನಡೆಸಿರುವುದು ಕ್ಷೇತ್ರದ ಜನರಲ್ಲಿ ತೀವ್ರ ಅಚ್ಚರಿ ಮೂಡಿಸಿದೆ.
ಇನ್ನೂ ಸಭೆಯ ಎರಡು ದಿನದ ನಂತರ ಹಂದಿ ಅಣ್ಣಿ ಕೊಲೆ ಆರೋಪಿಗಳನ್ನು ತನ್ನ ಆಂಬ್ಯುಲೆನ್ಸ್ ನಲ್ಲಿ ಎಸ್ಕೆಪ್ ಮಾಡಿಸಿದ ಆರೋಪದಡಿ 2 ದಿನಗಳ ಹಿಂದೆಯಷ್ಟೇ ದಾವಣಗೆರೆ ಪೊಲೀಸರಿಂದ ಬಂಧನವಾಗಿರುವುದಾಗಿ ತಿಳಿದುಬಂದಿದೆ.