ಕಾಣೆಯಾದ ಬಾಲಕ ಶವವಾಗಿ ಪತ್ತೆ
ದಾವಣಗೆರೆ: ನಗರದ ಚಿಕ್ಕಮಣಿ ಬಡಾವಣೆ ನಿವಾಸಿ ಕಲ್ಲೇಶ್ ಎನ್ನುವವರ 7 ಏಳು ವರ್ಷದ ಬುದ್ದಿಮಾಂದ್ಯ ಮಗ ಗಣ್ಯ ಕಾಣೆಯಾದ ಬಗ್ಗೆ ಶನಿವಾರ ಕೆಟಿ ಜಂಬಣ್ಣ ನಗರದ ಆರಕ್ಷಕ ಠಾಣೆಯಲ್ಲಿ ನಿನ್ನೆ 12:30 ಕ್ಕೆ ಕೇಸ್ ದಾಖಲಾಗಿತ್ತು.
ನಿನ್ನೆ ಮಧ್ಯಾಹ್ನ ದಿಂದ ಪೋಷಕರು ಸಂಬಂಧಿಕರಾದ ಅಕ್ಕಪಕ್ಕದವರು ಮಗುವನ್ನು ಹುಡುಕಾಡಿದರು ಸಿಕ್ಕಿರಲಿಲ್ಲ.
ಇಂದು ಮುಂಜಾನೆ ನಗರದ ನೀರು ಸಂಗ್ರಹಣಾ (ಟಿವಿ ಸ್ಟೇಷನ್) ಕೆರೆಯಲ್ಲಿ ಶವವಾಗಿ ಪತ್ತೆಯಾಗಿದು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ ಕೆ. ಟಿ.ಜಂಬಣ್ಣ ನಗರದ ಆರಕ್ಷಕ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ.