ದಾವಣಗೆರೆ: ಭಾರತವನ್ನು ತುಂಡು ತುಂಡು ಮಾಡುತ್ತೇವೆಂದು ಹೇಳಿಕೆ ನೀಡಿದ್ದ ದೇಶ ದ್ರೋಹಿ ಕನ್ನಯ್ಯ ಕುಮಾರ್ ಅವರನ್ನು ಕಾಂಗ್ರೆಸ್ ಕರೆ ತಂದು ದಾವಣಗೆರೆಯಲ್ಲಿ ಪ್ರಚಾರ ನಡೆಸಿರುವದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ನಾಗರಾಜ ಸುರ್ವೆ ಕಿಡಿಕಾರಿದ್ದಾರೆ.
ದಾವಣಗೆರೆಯ ಉತ್ತರ ಹಾಗೂ ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು ಕನ್ನಯ್ಯ ಕುಮಾರ್ ಅವರನ್ನು ಸ್ಟಾರ್ ಪ್ರಚಾರಕರು ಎಂದು ಕರೆ ತಂದು ತಮ್ಮ ಪರ ಮತಯಾಚಿಸಿದ್ದಾರೆ.
ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಎಂತಹ ನೀಚ ಕೃತ್ಯಕ್ಕೂ ಇಳಿಯಬಲ್ಲದು ಎಂಬುದು ಇದರಿಂದ ತಿಳಿಯುತ್ತದೆ. ಈ ಬಗ್ಗೆ ದಾವಣಗೆರೆಯ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದವರು ಹೇಳಿದ್ದಾರೆ.
ಭಯೋತ್ಪಾದಕರೊಂದಿಗೆ ಕೈ ಜೋಡಿಸಿ, ಭಾರತವನ್ನು ತುಂಡು ಮಾಡುತ್ತೇನೆ. ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಡಿಸುತ್ತೇನೆ. ಭಾರತವನ್ನು ದುರ್ಬಲಗೊಳಿಸುತ್ತೇನೆ ಎಂದು ಹೇಳಿರುವ ಕನ್ನಯ್ಯ ಕುಮಾರ್ ಒಬ್ಬ ದೇಶದ್ರೋಹಿ. ಆ ವ್ಯಕ್ತಿಯನ್ನು ಕರೆಯಿಸಿ ಪ್ರಚಾರ ಮಾಡಿಸುವ ಕಾಂಗ್ರೆಸ್ ಪಕ್ಷಕ್ಕೆ ದಾವಣಗೆರೆ ಜನತೆ ಯಾವ ಕಾರಣಕ್ಕೂ ಮತ ನೀಡದಂತೆ ನಾಗರಾಜ ಸುರ್ವೆ ಕೋರಿದ್ದಾರೆ.
