ಶಾಲೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿರಿ. ಮೈನ್ಸ್ ಅಂಡ್ ಜಿಯಾಲಜಿ ಉಪನಿರ್ದೇಶಕ ಮಹೇಶ್

ಚಿತ್ರದುರ್ಗ: ಶಾಲೆಗೆ ಬಂದ ತಕ್ಷಣ ವಿದ್ಯಾರ್ಥಿಗಳು ಶಾಲೆಯ ಆವರಣವನ್ನು ಸುಂದರವಾಗಿಟ್ಟುಕೊಂಡರೆ ಮಾತ್ರ ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ ಉತ್ಸಾಹವಾಗುತ್ತದೆ ಪ್ರತಿಯೊಬ್ಬರು ಸಹ ಶಾಲಾ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರೋತ್ಸಾಹಿಸಬೇಕು ಪ್ಲಾಸ್ಟಿಕ್ ಮುಕ್ತ ವಾತಾವರಣವನ್ನು ನಿರ್ಮಿಸಿ ಪರಿಸರವನ್ನ ಸ್ವಚ್ಛವಾಗಿಟ್ಟುಕೊಂಡಷ್ಟು ನಮಗೆ ಆರೋಗ್ಯ ದೊರಕುವುದು ಎಂದು ಮೈನ್ಸ್ ಅಂಡ್ ಜಿಯಾಲಜಿ ಸಂಸ್ಥೆಯ ಉಪನಿರ್ದೇಶಕರಾದ ಮಹೇಶ್ ರವರು ಮಾತನಾಡಿದರು.
ಅವರು. ಚಿತ್ರದುರ್ಗ ನಗರದ  ಕೆ.ಬಿ. ಬಡಾವಣೆಯ ಸರ್ಕಾರಿ ಮಾದರಿ ಪ್ರಧಾನ ಬಾಲಕಿಯರ ಉನ್ನತ ಪ್ರಾರ್ಥಮಿಕ ಪಾಠಶಾಲೆಯಲ್ಲಿ  ಮೈನ್ಸ್ ಅಂಡ್ ಜಿಯಾಲಜಿ ಮತ್ತು ಜಾನ್ ಮೈನ್ಸ್ ಸಂಯುಕ್ತವಾಗಿ ಆಯೋಜಿಸಿದ್ದ ಸ್ವಚ್ಛತಾ ಪಕ್ವಾಡ ಮತ್ತು ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪ್ರವೀಣ್ ಚಂದ್ ರವರ ಜಾನ್ ಮೈನ್ಸ್ನ ಲಾಜಿಸ್ಟಿಕ್ ಮ್ಯಾನೇಜರ್ ಸುಭಾಷ್ ಚೌಹಾಣ್ ಮಾತನಾಡುತ್ತಾ ಪ್ರಧಾನ ಮಂತ್ರಿಗಳು ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದು, ನಮ್ಮ ಸುತ್ತಮುತ್ತಲಿರುವ ಪರಿಸರವನ್ನು ನಿಯಮ ಬದ್ಧವಾಗಿ ಇಟ್ಟುಕೊಳ್ಳಬೇಕು. ಪ್ರಾಣಿಗಳಿಗೂ ಮತ್ತು ಮನುಷ್ಯನಿಗೂ ಇರುವ ವ್ಯತ್ಯಾಸವಿದೆ, ಪ್ರಾಣಿಗಳಿಂದ ಮನುಷ್ಯ ಹೆಚ್ಚು ಯೋಚಿಸುವಂತಹ ಶಕ್ತಿ ಉಳ್ಳವನಾಗಿದ್ದಾನೆ, ಹಾಗಾಗಿ ಅವನು ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಮಕ್ಕಳು ಕೈಕಾಲುಗಳನ್ನು ತೊಳೆದುಕೊಂಡು ಊಟ ಮಾಡಬೇಕು, ಶೌಚಾಲಯದ ನಂತರ ಸೋಪು ಬಳಸಿ ಕೈ ತೊಳೆದುಕೊಳ್ಳಬೇಕು.  ಶಾಲೆಯಲ್ಲಿ ಶೌಚಾಲಯವನ್ನು ಉತ್ತಮ ಗುಣಮಟ್ಟದಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸುತ್ತಾ ಶಾಲೆಗೆ ಸ್ವಚ್ಛತಾ ಸಾಮಗ್ರಿಗಳಾದಂತ ಪೊರಕೆ, ಬಕೇಟು, ಕಸದ ಬುಟ್ಟಿ, ಮಕ್ಕಳಿಗೆ ಬಾಚಣಿಕೆ, ಬ್ರಷ್, ನೈಲ್ ಕಟರ್ ಮುಂತಾದ ವಸ್ತುಗಳನ್ನ ವಿತರಿಸಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ.ಹೆಚ್. ಕೆ.ಎಸ್. ಸ್ವಾಮಿಯವರು ಮಕ್ಕಳಿಗೆ ಪ್ಲಾಸ್ಟಿಕ್ ವಸ್ತುಗಳನ್ನ ಮರುಗೆ ಮರುಬಳಕೆ ಮಾಡಿ ಪರಿಸರನ್ನ ಉಳಿಸಿಕೊಳ್ಳಬೇಕು. ಗಾಂಧೀಜಿಯವರ ಚರಕವನ್ನು ಬಳಸಿ ನಮ್ಮ ವಸ್ತುಗಳನ್ನು ನಾವೇ ಉತ್ಪಾದನೆ ಮಾಡಿಕೊಳ್ಳಬೇಕು.  ಜನರು ಹೆಚ್ಚಾಗಿ ಭಾಗವಹಿಸಿ ಶಾಲೆಗಳ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕು ಎಂದು ಪ್ರಾತ್ಯಕ್ಷಿಕೆ ಮುಖಾಂತರ ತಿಳಿಸಿಕೊಟ್ಟರು.
ಮನಪ್ಪುರಂ ಜ್ಯುವೆಲ್ಲರ್ಸ್ ವತಿಯಿಂದ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಾಗೇಂದ್ರಪ್ಪ ಸೀನಿಯರ್ ಜಿಯಾಲಜಿಸ್ಟ್, ನಯಾಜ್ ಅಹಮದ್ ಖಾನ್  ಜಿಯಾಲಜಿಸ್ಟ್, ಶ್ರೀಮತಿ ಶ್ವೇತ CRP, ಸುಖಪುತ್ರಪ್ಪ  ಮುಖ್ಯೋಪಾಧ್ಯಾಯರು, ಸಿಡಿಎಂಸಿ ಅಧ್ಯಕ್ಷರಾದ ಕವಿತಾ, ನಗರಸಭಾ ಸದಸ್ಯರಾದ ಚಂದ್ರಣ್ಣ ರವರ ಮಗ ವಿನಯ್, CRP ಶ್ವೇತ,ಶಾಲಾ ಶಿಕ್ಷಕರು, ಹಳೆ ವಿದ್ಯಾರ್ಥಿಗಳಾದ ರಂಗನಾಥ್, ಚಂದನ್, ಮಂಜುನಾಥ್, ಕಾವ್ಯ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!