ಕಬ್ಬಳ ಗ್ರಾಮದಲ್ಲಿ ಕೆಂಡಾರ್ಚನೆ ಹಾಗೂ ರಥೋತ್ಸವ

ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದಲ್ಲಿ ಶ್ರೀ ಕನಕಗಿರಿ ಚನ್ನಮಲ್ಲಿಕಾರ್ಜುನಸ್ವಾಮಿ ಮತ್ತು ಶ್ರೀ ದುರ್ಗಾಂಭಿಕಾದೇವಿಯ ಕೆಂಡಾರ್ಚನೆ ಹಾಗೂ ರಥೋತ್ಸವ ಕಾರ್ಯಕ್ರಮವನ್ನು ಮಾ.11ರ ಶುಕ್ರವಾರ ಮತ್ತು ಶನಿವಾರ ಹಮ್ಮಿಕೊಳ್ಳಲಾಗಿದೆ ಎಂದು ಹಾಲೇಶ್‌ನಾಯ್ಕ್ (ಎಲ್‌ಐಸಿ ಆಫ್ ಇಂಡಿಯಾ) ತಿಳಿಸಿದ್ದಾರೆ.ಶುಕ್ರವಾರ ಬೆಳಿಗ್ಗೆ 9.10 ರಿಂದ 10.35 ರವರೆಗೆ ಶ್ರೀ ಕನಕಗಿರಿ ಚನ್ನಮಲ್ಲಿಕಾರ್ಜುನಸ್ವಾಮಿ, ಬಸವಾಪಟ್ಟಣದ ಶ್ರೀ ದುರ್ಗಾಂಬಿಕಾದೇವಿ ಮತ್ತು ಸೇವಾಲಾಲ್ ಮರಿಯಮ್ಮ ದೇವಿಯ ಕೆಂಡಾರ್ಚನೆ ನಡೆಯಲಿದೆ. ಶನಿವಾರದಂದು ಶ್ರೀ ಕನಕಗಿರಿ ಚನ್ನಮಲ್ಲಿಕಾರ್ಜುನ ಸ್ವಾಮಿ ಮತ್ತು ಶ್ರೀ ದುರ್ಗಾಂಬಿಕಾ ದೇವಿಯ ರಥೋತ್ಸವ ನಡೆಯಲಿದೆ. ಇದೇ ದಿನ ಮಧ್ಯಾಹ್ನ 2 ಗಂಟೆಗೆ ಓಕುಳಿ ಕಾರ್ಯಕ್ರಮ ನೆರವೇರಲಿದೆ. ರಾತ್ರಿ 8 ಗಂಟೆಯಿAದ ಉಭಯ ದೇವರುಗಳ ಹೂವಿನ ಅಡ್ಡಪಲ್ಲಕ್ಕಿ ಉತ್ಸವವು ನೆರವೇರುವುದು.
ಕಬ್ಬಳ ಗ್ರಾಮದಲ್ಲಿ ನಡೆಯುವ ಶ್ರೀ ಕನಕಗಿರಿ ಚನ್ನಮಲ್ಲಿಕಾರ್ಜುನಸ್ವಾಮಿ ಮತ್ತು ಶ್ರೀ ದುರ್ಗಾಂಭಿಕಾದೇವಿಯ ಕೆಂಡಾರ್ಚನೆ ಹಾಗೂ ರಥೋತ್ಸವ ಕಾರ್ಯಕ್ರಮಕ್ಕೆ ವಿವಿಧ ಗ್ರಾಮಗಳ ಸದ್ಭಕ್ತರು ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಕನಕಗಿರಿ ಚನ್ನಮಲ್ಲಿಕಾರ್ಜುನಸ್ವಾಮಿ, ಶ್ರೀ ಸೇವಾಲಾಲ್ ಸಮಿತಿ ಹಾಗೂ ಶ್ರೀ ಕೋದಂಡರಾಮಸ್ವಾಮಿ ಸೇವಾ ಸಮಿತಿ ಹಾಗೂ ಕಬ್ಬಳ ಗ್ರಾಮದ ಸರ್ವ ಸದ್ಬಕ್ತರು ಕೋರಿದ್ದಾರೆ.