ಕೆಜಿಎಫ್ ಚಾಪ್ಟರ್ 2′ ಟ್ರೇಲರ್! ಈ ಬಾರಿ ಎಂಟ್ರಿ ಕೊಡ್ತಿರೋದು ಶಿವಣ್ಣ
ಬೆಂಗಳೂರು : ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಅಬ್ಬರಿಸಲು ಸಜ್ಜಾಗಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಏ.14ರಂದು ವಿಶ್ವಾದ್ಯಂತ ಕೆಜಿಎಫ್ 2 ಬಿಡುಗಡೆ ಆಗಲಿದ್ದು, ಅದಕ್ಕಾಗಿ ಯಶ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈಗ ಟ್ರೇಲರ್ ಬಗ್ಗೆ ಕಾತರ ಹೆಚ್ಚಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲೇ ಹಮ್ಮಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಸಕಲ ತಯಾರಿ ನಡೆದಿದೆ. ಇಡೀ ಭಾರತೀಯ ಚಿತ್ರರಂಗದಲ್ಲಿ ಮತ್ತೆ ಹಳೇ ಚಾರ್ಮ್ ಮರುಕಳಿಸಿದೆ. ಕೊರೊನಾ ಹಾವಳಿ ಕಡಿಮೆ ಆಗಿರುವುದರಿಂದ ಜನರು ಚಿತ್ರಮಂದಿರಕ್ಕೆ ಬಂದು ಎಂದಿನತೆ ಎಂಜಾಯ್ ಮಾಡುತ್ತಿದ್ದಾರೆ. ಕೋವಿಡ್ ಕಾರಣದಿಂದ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಡಿದ್ದ ಅನೇಕ ಬಿಗ್ ಬಜೆಟ್ ಸಿನಿಮಾಗಳು ಒಂದೊAದಾಗಿಯೇ ರಿಲೀಸ್ ಆಗುತ್ತಿವೆ. ಇತ್ತೀಚೆಗೆ ‘ಜೇಮ್ಸ್’ ಸಿನಿಮಾ ಬಂದು ಧೂಳೆಬ್ಬಿಸಿತು. ಈಗ ‘ಆರ್‌ಆರ್‌ಆರ್’ ಚಿತ್ರ ಕೂಡ ಸಖತ್ ಸೌಂಡು ಮಾಡಿದೆ.
ಹೌದು, ‘ಕೆಜಿಎಫ್ ಚಾಪ್ಟರ್ 2’ ಟ್ರೇಲರ್ ಮಾ.27ರಂದು ಬಿಡುಗಡೆ ಆಗಲಿದೆ. ಅದನ್ನು ರಿಲೀಸ್ ಮಾಡುವುದು ಯಾರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ‘ಹ್ಯಾಟ್ರಿಕ್ ಹೀರೋ’ ಶಿವರಾಜ್ ಕುಮಾರ್ ಅವರು ‘ಕೆಜಿಎಫ್ 2’ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಈ ಬಗ್ಗೆ ಚಿತ್ರತಂಡದಿದ ಅಧಿಕೃತವಾಗಿ ಮಾಹಿತಿ ಹೊರಬಿದ್ದಿದೆ. ‘ಕೆಜಿಎಫ್ ಚಾಪ್ಟರ್ 2’ ಬಿಡುಗಡೆಗೆ ಇನ್ನು ಕೆಲವೇ ದಿನಗಳ ಬಾಕಿ ಉಳಿದುಕೊಂಡಿದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ಚಾಲನೆ ನೀಡಿದೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದಿಂದ ‘ತೂಫಾನ್..’ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ಜನರಿಂದ ಭರ್ಜರಿ ಸ್ಪಂದನೆ ಸಿಕ್ಕಿದೆ. ಅದರ ಬೆನ್ನಲ್ಲೇ ಅದ್ದೂರಿಯಾಗಿ ಟ್ರೇಲರ್ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಕನ್ನಡದಲ್ಲಿ ನಿರ್ಮಾಣವಾದ ಈ ಚಿತ್ರ ತೆಲುಗು, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲೇ ಹಮ್ಮಿಕೊಳ್ಳಲಾಗುತ್ತಿದೆ. ವಿವಿಧ ರಾಜ್ಯಗಳಿಂದ ಮಾಧ್ಯಮದವರನ್ನು ಆಹ್ವಾನಿಸಲಾಗಿದೆ. ಎಲ್ಲರ ಸಮ್ಮುಖದಲ್ಲಿ ಶಿವರಾಜ್‌ಕುಮಾರ್ ಅವರು ಈ ಸಿನಿಮಾದ ಟ್ರೇಲರ್ ಅನಾವರಣ ಮಾಡಲಿದ್ದಾರೆ. ಈ ವಿಚಾರವನ್ನು ‘ಹೊಂಬಾಳೆ ಫಿಲ್ಮ್÷್ಸ’ ಸಂಸ್ಥೆಯು ತನ್ನ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ತಿಳಿಸಿದೆ. ಈ ಸುದ್ದಿ ಕೇಳಿ ಶಿವಣ್ಣನ ಫ್ಯಾನ್ಸ್ ಖುಷಿ ಆಗಿದ್ದಾರೆ.