ಖೋ-ಖೋ ಕ್ರೀಡಾಪಟು ಆಯ್ಕೆ
ದಾವಣಗೆರೆ : ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಖೋ-ಖೋ ಪಂದ್ಯಾವಳಿಗೆ ದಾವಣಗೆರೆ ವಿಶ್ವವಿದ್ಯಾಲಯದ ತಂಡದಿಂದ ಜಿಲ್ಲಾ ಕ್ರೀಡಾ ವಸತಿ ನಿಲಯದ ಖೋ-ಖೋ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ ಏಪ್ರಿಲ್ 11 ರಿಂದ 16 ರವರೆಗೆ ನಡೆಯಲಿರುವ ಪಂದ್ಯಾವಳಿಗೆ ಜಿಲ್ಲಾ ಕ್ರೀಡಾ ವಸತಿ ನಿಲಯ ಖೋ-ಖೋ ಕ್ರೀಡಾ ಪಟುಗಳಾದ ಬಾಹುಬಲಿ ಎಸ್.ಬಿ (ತಂಡದ ನಾಯಕ), ಭರತ್‌ಕುಮಾರ್ ಪಿ.ಬಿ, ಅರ್ಜುನ್, ಶರತ್ ಜೆ.ಜಿ, ಲಕ್ಷ್ಮಣ, ಮಹಮ್ಮದ್ ತಾಸೀನ್, ಷರೀಫ್ ಯಲಿಗಾರ್, ಗಜಚೌಹಣ್, ದರ್ಶನ್‌ಎ.ಟಿ ಹಾಗೂ ಲಂಕೇಶ ಆಯ್ಕೆಯಾಗಿದ್ದಾರೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.