ಸಾಧಿಸಲು ಜ್ಞಾನದ ಹಂಬಲವಿರಲಿ : ಪ್ರೊ.ವೆಂಕಟೇಶ್ ಬಾಬು

WhatsApp Image 2022-02-24 at 2.29.24 PM

ನಿರಂತರ ಓದಿನಿಂದ ಜ್ಞಾನ ಪಡೆಯಲು ಸಾಧ್ಯ ಜ್ಞಾನ ಪಡೆಯುವಲ್ಲಿ ವಿದ್ಯಾರ್ಥಿಗಳಲ್ಲಿ ಹಂಬಲವಿರಬೇಕು ಓದುವುದಕ್ಕೆ ಆಸಕ್ತಿ ತೋರಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊಫೆಸರ್ ವೆಂಕಟೇಶ್ ಬಾಬು ಅವರು ಹೇಳಿದರು. ಅವರು ಇಂದು ನಗರದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಹಾಸ್ಟೆಲ್ ಜೀವನವು ಬಹು ಮುಖ್ಯವಾದುದು ಹಾಸ್ಟೆಲ್ ಎಂಬುದು ಗ್ರಂಥಾಲಯಗಳಾಗಿವೆ ಜ್ಞಾನದೇಗುಲಗಳಾಗಿವೆ ಸಾಧಕರನ್ನು ಉತ್ಪಾದಿಸುವಂತಹ ವಿದ್ಯಾ ಕೇಂದ್ರಗಳಾಗಬೇಕು ಅಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಪ್ರತಿದಿನವೂ ಪ್ರತಿಕ್ಷಣವೂ ಜ್ಞಾನದ ಕಡೆ ಒಲವು ತೋರಬೇಕು ಜ್ಞಾನದ ಹಂಬಲದಿಂದ ಏನಾದರೂ ಸಾಧಿಸಲು ಸಾಧ್ಯ ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು .
ಇಂದಿನ ವಿದ್ಯಾರ್ಥಿಗಳು ಶಿಸ್ತಿನಿಂದ ಬದುಕುವುದನ್ನು ಕಲಿಯಬೇಕು . ಸಾಮಾಜಿಕ ಜಾಲತಾಣ ಮೊಬೈಲ್ ಗಳ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕಗಳನ್ನು ಹೆಚ್ಚೆಚ್ಚು ಓದಿದರೆ ಜ್ಞಾನವಂತರಾಗುತ್ತಾರೆ. ಸ್ಪಷ್ಟವಾದ ಗುರಿ ಸತತ ಪ್ರಯತ್ನ ಆತ್ಮವಿಶ್ವಾಸ ಛಲ ದಿಂದ ಯಾವುದೇ ಕಾರ್ಯವನ್ನು ಸಾಧಿಸಲು ಸಾಧ್ಯ ವಿದ್ಯಾರ್ಥಿಗಳು ತಮ್ಮ ಹಣೆಬರಹವನ್ನು ನಂಬದೆ ಪ್ರಯತ್ನದಿಂದ ಹಣೆಬರಹ ಬದಲಾಯಿಸಬಹುದು ಎಂಬುದನ್ನು ಸಾಬೀತು ಮಾಡುವಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಶ್ರೀ ಎಸ್ ಆರ್ ಗಂಗಪ್ಪನವರು ಮಾತನಾಡುತ್ತಾ ಹಾಸ್ಟೆಲ್ ಗಳಲ್ಲಿ ಓದುವ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಹಾಸ್ಟೆಲ್ ಗೆ ಕೀರ್ತಿ ತರುವಂಥಹ ಕೆಲಸವನ್ನು ಮಾಡಬೇಕು ವಿದ್ಯಾರ್ಥಿ ಜೀವನವು ಬಂಗಾರದ ಜೀವನ ಆ ಜೀವನವನ್ನು ಹಾಳುಮಾಡಿಕೊಳ್ಳದೇ ಬಂಗಾರ ವಾಗಿಸಿಕೊಳ್ಳಲು ಮೂರರಿಂದ ಐದು ವರ್ಷಗಳ ಶ್ರಮದ ಅವಶ್ಯಕತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಲಯಪಾಲಕರಾದ ಶ್ರೀ ಜಗದೀಶ್ ರವರು ವಹಿಸಿದ್ದರು ಅವರು ಮಾತನಾಡುತ್ತಾ ಸಂಪನ್ಮೂಲಗಳ ವ್ಯಕ್ತಿಗಳಿಂದ ಸಿಗುವ ಸಂಪನ್ಮೂಲವನ್ನು ಜೀವನದಲ್ಲಿ ರೂಢಿಸಿಕೊಂಡು ಸಾಧಕರಾಗಿ ಹೊರಹೊಮ್ಮಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ವಿಸ್ತರಣಾಧಿಕಾರಿಗಳಾದ ಶ್ರೀ ವಿ ಪ್ರಕಾಶ್ ರವರು ವಿನ್ನರ್ಸ್ನ ಅಕಾಡಮಿಯ ಸಂದೇಶ ಪ್ರಭಾಕರ್ ರವರು ಬಸವರಾಜ್ ರವರು ಜಾಫರ್ ಸಾದಿಕ್ ರವರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಪ್ರಹ್ಲಾದ್ ರವರು ನಿರುಪಿಸಿದರೆ ಮಂಜುನಾಥ್ ರವರು ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಜಾಫರ್ ಸಾದಿಕ್ ರವರು ಅತಿಥಿಗಳಿಗೆ ವಂದನಾರ್ಪಣೆಯನ್ನು ಹೇಳಿದರು .

Leave a Reply

Your email address will not be published. Required fields are marked *

error: Content is protected !!