ಸಾಧಿಸಲು ಜ್ಞಾನದ ಯಾಗ ಅವಶ್ಯಕ – ಉಪನ್ಯಾಸಕ ವೆಂಕಟೇಶ್ ಬಾಬು ಎಸ್ 

IMG-20211226-WA0001

ದಾವಣಗೆರೆ: ಇಂದಿನ ವಿದ್ಯಾರ್ಥಿಗಳು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ಈ ಜ್ಞಾನದ ಯುಗದಲ್ಲಿ ಜ್ಞಾನದ ಯಾಗವನ್ನು ಕೈಗೊಂಡರೆ ಸಾಧನೆ ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಹಾಗೂ ವ್ಯಕ್ತಿತ್ವ ವಿಕಸನ ಉಪನ್ಯಾಸಕರಾದ ವೆಂಕಟೇಶ್ ಬಾಬು ಎಸ್ ರವರು ಹೇಳಿದರು.

ಅವರು ಇಂದು ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ಇರುವ ಗುರುಭವನದಲ್ಲಿ ಸ್ಪರ್ಧಾ ದಿಗ್ವಿಜಯ ಕೆರಿಯರ್ ಅಕಾಡೆಮಿ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿಗಳಿಗೆ ಆಯೋಜಿಸಿದ್ದ ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು .

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನಕ್ಕೆ ಮಹತ್ವ ಯಾರು ಜ್ಞಾನವನ್ನು ಯಾಗದ ರೂಪದಲ್ಲಿ ಓದಿಕೊಂಡು ಪಡೆದುಕೊಳ್ಳುತ್ತಾರೋ ಅವರು ಅಂದುಕೊಂಡ ಸಾಧನೆ ಅವರಿಗೆ ಸುಲಭವಾಗುತ್ತದೆ ಜ್ಞಾನಾರ್ಜನೆ ಆದಾಗ ಮಾತ್ರ ಸಾಧಿಸಲು ಸಾಧ್ಯ ಎಂದು ಹೇಳಿದರು. ಮನುಷ್ಯನ ಬದುಕು ಚಿಕ್ಕದಾಗಿ ಆರಂಭವಾದರೂ ಜ್ಞಾನಾರ್ಜನೆ ಮೂಲಕ ಅವರ ಯಶಸ್ಸು ಬಹುದೊಡ್ಡದಾಗಿರಲೇ ಬೇಕು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಕೈಗೊಂಡರೆ ಅದು ಸಾಧ್ಯವಾಗುತ್ತದೆ. ಇಂದಿನ ಸ್ಪರ್ಧಾಕಾಂಕ್ಷಿಗಳಲ್ಲಿ ಪ್ರೇರಣೆಯ ಕೊರೆತೆ ಇದೆ ಆ ಪ್ರೇರಣೆಯನ್ನು ಇನ್ನೊಬ್ಬರಿಂದ ಪಡೆಯುವ ಬದಲು ತಮಗೆ ತಾವೇ ಪ್ರೇರಣೆಗೊಂಡು ಅಭ್ಯಸಿಸಿದರೆ ಅವರು ಮತ್ತೊಬ್ಬರಿಗೆ ಪ್ರೇರಣೆ ಆಗುವ ರೀತಿಯಲ್ಲಿ ಬೆಲೆಯಬಹುದು ಹಾಗಾಗಿ ಎಲ್ಲರೂ ತಮ್ಮನ್ನು ತಾವು ಮೊದಲು ಇಷ್ಟಪಡಿ ನಂತರ ಬೇರೆಯವರು ನಿಮ್ಮನ್ನು ಇಷ್ಟ ಪಡಲು ಆರಂಭಿಸುತ್ತಾರೆ ಎಂದು ಅಭಿಪ್ರಾಯ ಪಟ್ಟರು.

ನಿಮ್ಮ ಕನಸನ್ನು ಚಿತ್ರಿಸಿಕೊಂಡು ಅವರ ಆಗುವ ಸಂತೋಷವನ್ನು ಜೀವನದುದ್ದಕ್ಕೂ ಪಡೆಯಲು ನೀವು ಸಾಧಿಸಲೇ ಬೇಕು ಹಾಗಾಗಿ ಕನಸನ್ನು ಸಾಕಾರಗೊಳಿಸುವತ್ತ ನಿರಂತರ ಪ್ರಯತ್ನ ಛಲ ಆತ್ಮವಿಶ್ವಾಸದಿಂದ ಆವಶ್ಯಕ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಎವಿಕೆ ಮಹಿಳಾ ಕಾಲೇಜಿನ ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕರಾದ ಪ್ರೊಫೆಸರ್ ಬೋರಯ್ಯನವರು ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಆಕಾಂಕ್ಷೆಯ ಕೊರತೆ ಕಾಣುತ್ತದೆ ಆಕಾಂಕ್ಷೆಯನ್ನು ಬೆಳೆಸಿಕೊಂಡರೆ ಏನಾದರೂ ಮಾಡಲು ಸಾಧ್ಯ ಪ್ರತಿಯೊಬ್ಬರು ದಿನನಿತ್ಯದ ಕೆಲಸದ ನಡುವೆ ಓದನ್ನು ರೂಢಿಸಿಕೊಂಡರೆ ಅವರಿಗೆ ಜ್ಞಾನವು ಹರಿದು ಬರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತರಬೇತುದಾರರಾದ ಪಾರ್ಶ್ವನಾಥರು ಮಾತನಾಡುತ್ತಾ ಸರ್ಕಾರದ ಕೆಲಸಗಳನ್ನು ಪಡೆಯಲು ದೀರ್ಘ ಕಠಿಣವಾದ ಅಭ್ಯಾಸ ದ ಜತೆಗೆ ಕೆಲವೊಂದು ಓದುವ ತಂತ್ರಗಾರಿಕೆಯನ್ನು ರೂಢಿಸಿಕೊಳ್ಳಬೇಕು ಓದುವ ತಂತ್ರಗಾರಿಕೆಗಳು ಹಾಗೂ ಕೌಶಲ್ಯಗಳನ್ನು ಸ್ಪರ್ಧಾ ದಿಗ್ವಿಜಯ ನಿಮಗೆ ನೀಡುತ್ತದೆ ಈ ನಿಟ್ಟಿನಲ್ಲಿ ಆನ್ ಲೈನ್ ಆ್ಯಪ್ ಕೂಡ ಬಿಡುಗಡೆಗೊಳಿಸಿದ್ದು ಇದರ ಮೂಲಕ ವಿದ್ಯಾರ್ಥಿಗಳು ಆಫ್ಲೈನ್ ಮತ್ತು ಆನ್ ಲೈನ್ ಮೂಲಕ ತಯಾರಿಯನ್ನು ನಡೆಸಬಹುದು ಎಂದು ಹೇಳಿದರು.

ಅಕಾಡೆಮಿಯ ಗೌರವಾಧ್ಯಕ್ಷರಾದ ಅನಿಲ್ ಕುಮಾರ್ ಅವರು ಮಾತನಾಡುತ್ತಾ ಕೆರಿಯರ್ ಅಕಾಡೆಮಿ ಕುರಿತು ವಿವರಗಳನ್ನು ಸ್ಪರ್ಧಾ ಕಾಂಕ್ಷಿಗಳಿಗೆ ನೀಡಿದರು. ವಿದ್ಯಾಕಾಶಿ ಎಂದೆನಿಸಿಕೊಂಡಿರುವ ದಾವಣಗೆರೆ ಮುಂದಿನ ದಿನಗಳಲ್ಲಿ ಸ್ಪರ್ಧಾ ಕಾಶಿಯಾಗಿ ರೂಪುಗೊಳ್ಳುವುದರಲ್ಲಿ ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ರಾಜು ಉಪನ್ಯಾಸಕರಾದ ಸುರೇಶ್ ಹಾಗೂ ದಾವಣಗೆರೆಯ ವಿವಿಧ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಪರ್ಧಾ ಆಕಾಂಕ್ಷಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಬಸವರಾಜ್ ಹಾಗೂ ಪ್ರಾರ್ಥನೆಯನ್ನು ಕುಮಾರಿ ಕಾವ್ಯಾ ಮತ್ತು ಸಂಗಡಿಗರು ನಡೆಸಿಕೊಟ್ಟರು.

ಸ್ಪರ್ಧಾ ಕೆರಿಯರ್ ಅಕಾಡೆಮಿಯ ಎಲ್ಲ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!