ಕೋಳಿಗೂ ಟಿಕೆಟ್ ನೀಡಿದ ನಿರ್ವಾಹಕ: ಸಾಮಾಜಿಕ ಜಾಲತಾಣದಲ್ಲಿ ಪೋಟೊ ವೈರಲ್

IMG-20210902-WA0000

 

ಗುಡಿಬಂಡೆ : ರಾಜ್ಯ ರಸ್ತೆ ಸಾರಿಗೆ ನಿಗಮದ ( ಕೆಎಸ್‌ಆರ್‌ಟಿಸಿ ) ಬಸ್‌ನಲ್ಲಿ ಸಾಗಿಸುತ್ತಿದ್ದ ಕೋಳಿಗೆ ಪ್ರಯಾಣಿಕರ ದರ ವಿಧಿಸಿ ಟಿಕೆಟ್ ನೀಡಿದ ಕಂಡಕ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ .

ಚಿಕ್ಕಬಳ್ಳಾಪುರ ಘಟಕದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪೆರೇಸಂದ್ರದಿಂದ ಗುಡಿಬಂಡೆ ತಾಲೂಕಿನ ಸೋಮೇಶ್ವರಕ್ಕೆ ಹೋಗುತ್ತಿದ್ದ ಪ್ರಯಾಣಿಕ ತನ್ನ ಜತೆ ಕೋಳಿ ಕೊಂಡೊಯ್ಯುತ್ತಿದ್ದ . ಈ ವೇಳೆ ನಿರ್ವಾಹಕ ಕೋಳಿಗೂ 5 ರೂ . ಟಿಕೆಟ್ ನೀಡಿದ . ಟಿಕೆಟ್ ಪಡೆದ ಮಾಲೀಕ ಕೋಳಿಯನ್ನು ಸೀಟ್ ಮೇಲೆ ಕೂರಿಸಿ ಪ್ರಯಾಣ ಬೆಳೆಸಿದ . ಪ್ರಯಾಣಿಕರು ಕೋಳಿ ತೆಗೆದು ಸೀಟ್ ಬಿಟ್ಟು ಕೊಡಿ ಎಂದು ಕೇಳಿದಾಗ , ನಾನು ಟಿಕೆಟ್ ಪಡೆದಿದ್ದೇನೆ . ಹಾಗಾಗಿ ಕೋಳಿಯನ್ನು ನನ್ನ ಜತೆ ಸೀಟ್‌ನಲ್ಲಿ ಕೂರಿಸಿದ್ದೇನೆ ಎಂದು ಪ್ರಯಾಣಿಕ ಉತ್ತರ ನೀಡಿದ್ದಾನೆ .

ಸಾಮಾನ್ಯವಾಗಿ ಯಾವುದೇ ವಸ್ತುಗಳು ಹಾಗೂ ಜೀವಿಗಳನ್ನು ಬಸ್ಸಿನಲ್ಲಿ ಪ್ರಾಣಿಗಳ ಜೊತೆಗೆ ತೆಗೆದುಕೊಂಡು ಹೋಗುವುದಾದರೆ. ನಿರ್ದಿಷ್ಟ ಕೆಜಿ ಅಥವಾ ಪ್ರಮಾಣಕ್ಕಿಂತ ಹೆಚ್ಚು ವಸ್ತುಗಳಿಗೆ ಬಸ್ ನಿರ್ವಾಹಕರು ಅರ್ಧ ಚೀಟಿ ಅಥವಾ ಲಗೇಜ್ ಗೆ ಚೀಟಿ ಕೊಡುತ್ತಾರೆ

Leave a Reply

Your email address will not be published. Required fields are marked *

error: Content is protected !!