ಮೈಕ್ರೋಬಿ ಫೌಂಡೇಶನ್ ವತಿಯಿಂದ ಮಾರ್ಚ್ 13 ರಂದು ಕ್ಷೇತ್ರೋತ್ಸವ ಹಾಗು ಅನ್ನದಾತರಿಗೆ ಸನ್ಮಾನ
ದಾವಣಗೆರೆ: ಮೈಕ್ರೋಬಿ ಫೌಂಡೇಷನ್, ಯಲಹಂಕ, ಬೆಂಗಳೂರು ವತಿಯಿಂದ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಶ್ರೀ ಶಿವನಾರದಮುನಿ ಕೃಷಿ ಮಾಹಿತಿ ಕೇಂದ್ರ ಮತ್ತು ಅತ್ತಿಗೆರೆ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಕ್ಷೇತ್ರೋತ್ಸವ ಹಾಗು ಅನ್ನದಾತರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾ.13 ರಂದು ಬೆಳಿಗ್ಗೆ 10:30 ಗಂಟೆಗೆ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಶ್ರೀನಿವಾಸ್ ಚಿಂತಾಲ್, ತೋಟಗಾರಿಕಾ ಉಪನಿರ್ದೇಶಕ ಡಾ. ಜಿ.ಸಿ ರಾಘವೇಂದ್ರ ಪ್ರಸಾದ್, ಖ್ಯಾತ ಸಾವಯವ ಕೃಷಿ ತಜ್ಞ, ಸಂಸ್ಥೆಯ ಅಧ್ಯಕ್ಷ ಡಾ. ಕೆ.ಆರ್.ಹುಲ್ಲುನಾಚೇಗೌಡ, ದಾವಣಗೆರೆ ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಪ್ರೊ. ಎನ್.ಕೆ.ಗೌಡ, ಪ್ರಜಾವಾಣಿ ಬ್ಯೂರೋ ಮುಖ್ಯಸ್ಥ ಸಿದ್ದಯ್ಯ ಹಿರೇಮಠ, ಹಿರಿಯ ಪತ್ರಕರ್ತ ನಾಗರಾಜ್ .ಎಸ್ ಬಡದಾಳ್ ಮತ್ತಿತರರು ಉಪಸ್ಥಿತರಿರುವರು.