Kunduwada Lake: ಕುಂದುವಾಡ ಕೆರೆಯ ಸುತ್ತ 30 ಮೀಟರ್ ಪ್ರದೇಶವನ್ನು ಬಫರ್ ಝೋನ್ ಎಂದು ನ್ಯಾಯಾಲಯ ಆದೇಶ

IMG-20210913-WA0010

 

ದಾವಣಗೆರೆ: ಕುಂದುವಾಡ ಕೆರೆಯ ಸುತ್ತಲಿನ 30 ಮೀ., ಬಫರ್ ಜೋನ್ ವ್ಯಾಪ್ತಿಗೆ ಒಳಪಡುವ ಭಾಗದಲ್ಲಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ, ಆ ಜಾಗವನ್ನು ಹದ್ದುಬಸ್ತು ಮಾಡಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎರಡು ತಿಂಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮ ತೆಗೆದು ಕೊಳ್ಳಸಿದ್ದರೆ ಯುವ ಭಾರತ್ ಗ್ರೀನ್ ಬ್ರಿಗೇಡ್ ನ್ಯಾಯಾಲಯದ ಮೂಲಕ ಹೋರಾಟ ನಡೆಸುತ್ತದೆ ಎಂದು ಬ್ರಿಗೇಡ್‌ನ ಜಿಲ್ಲಾಧ್ಯಕ್ಷ ನಾಗರಾಜ್ ಸುರ್ವೆ ಎಚ್ಚರಿಕೆ ನೀಡಿದರು.

ಕೆರೆಯನ್ನು ಅಭಿವೃದ್ಧಿ ಹೆಸರಿನಲ್ಲಿ ಹಾಳು ಗೆಡವಲಾವುತ್ತಿದೆ. ಇಲ್ಲಿ ನಿರ್ಮಿಸಲಾಗುತ್ತಿದ್ದ ಸೈಕಲ್ ಟ್ರ್ಯಾಕ್ ಬಗ್ಗೆ ಪ್ರಶ್ನಿಸಿ ನಮ್ಮ ಸಂಘಟನೆ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು. ಉಚ್ಛ ನ್ಯಾಯಾಲಯವು ಇದನ್ನು ರದ್ಧು ಮಾಡಿ, ಕೆರೆಯ ಸುತ್ತಲಿನ 30 ಮೀಟರ್ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಿ ಆದೇಶ ಹೊರಡಿಸಿದೆ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು.

ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಹಂತದಲ್ಲಿ ಕೆರೆಗಳಲ್ಲಿ ನೀರಿನ ಸಾಮರ್ಥ್ಯ ಹೆಚ್ಚಿಸಲು ಇವರ ಬಳಿ ಯಾವುದೇ ಯೋಜನೆಗಳಿಲ್ಲ. ಆದರೆ, ಜನರನ್ನು ದಿಕ್ಕುತಪ್ಪಿಸಲು ಕೆರೆಯ ಅಭಿವೃದ್ಧಿ ನೆಪದಲ್ಲಿ ಕೆರೆಯ ಸಾಮರ್ಥ್ಯವನ್ನು ಮತ್ತಷ್ಟು ಕ್ಷೀಣಿಸುವ ಪ್ಲಾನ್ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ನಮ್ಮ ಸಂಘಟನೆಯು ನ್ಯಾಯಾಲಯದ ಮೆಟ್ಟಿಲೇರಿತ್ತು. ಸತ್ಯಾಸತ್ಯತೆ ತಿಳಿದ ಬಳಿಕ ನ್ಯಾಯಾಲಯವು ಸ್ಮಾರ್ಟ್‌ಸಿಟಿ ಮತ್ತು ಪಾಲಿಕೆಯ ವಾದವನ್ನು ತಳ್ಳಿಹಾಕಿ, ಇದೊಂದು ಕೆರೆ ಎಂದು ಸ್ಪಷ್ಟಪಡಿಸಿದೆ‌ ಎಂದು ಹೇಳಿದರು.

ನಮ್ಮ ಹೋರಾಟದಿಂದ ಸೈಕಲ್ ಟ್ರ್ಯಾಕ್‌ಗೆ ಮೀಸಲಿಟ್ಟಿದ್ದ ಮೂರ್ನಾಲ್ಕು ಕೋಟಿ ಹಣ ಸರ್ಕಾರದ ಬೊಕ್ಕಸದಲ್ಲಿ ಉಳಿಸಿದಂತಾಗಿದೆ ಎಂದು ಹೇಳಿದ ಅವರು, ಜಿಲ್ಲಾಡಳಿತ ಇನ್ನೆರಡು ತಿಂಗಳಲ್ಲಿ ಕೆರೆಯ ಸುತ್ತಲಿನ ಬಫರ್ ಝೋನ್ ಪ್ರದೇಶದಲ್ಲಿ ನಿರ್ಮಾಣವಾಗಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ ಆ ಜಾಗವನ್ನು ಹದ್ದುಬಸ್ತು ಮಾಡಕೊಳ್ಳದಿದ್ದರೆ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಗಿರೀಶ್ ದೇವರಮನೆ, ಪ್ರಸನ್ನ ಬೆಳಕೆರೆ, ಎಸ್. ಕುಮಾರ್, ಮಂಜುನಾಥ್ ನೆಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!