ಬಿಬಿಸಿ ಸಂಸ್ಥೆ ಮೇಲೆ ದಾಳಿಗೆ ಕೆಯುಡಬ್ಲ್ಯೂಜೆ ಖಂಡನೆ

ಬಿಬಿಸಿ ಸಂಸ್ಥೆ
ಬೆಂಗಳೂರು:ಬಿಬಿಸಿ ಸುದ್ದಿ ಸಂಸ್ಥೆಯ ಮೇಲೆ ಐಟಿ ಸರ್ವೆ ಮಾಡಿರುವುದನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಖಂಡಿಸಿದೆ.
ಬಿಬಿಸಿಯಲ್ಲಿ ಕಾರ್ಯಕ್ರಮ ಪ್ರಸಾರ ಮಾಡಿದ ಬೆನ್ನಲ್ಲೇ ಈ ದಾಳಿ ನಡೆದಿರುವುದನ್ನು ನೋಡಿದರೆ, ಮಾಧ್ಯಮವನ್ನು ಭಯದಲ್ಲಿಟ್ಟು, ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ಇದಾಗಿದೆ ಎಂದು ಕೆಯುಡಬ್ಲ್ಯೂಜೆ ಪ್ರತಿಕ್ರಿಯಿಸಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ನಾಲ್ಕನೇ ಅಂಗವೆಂದು ಕರೆಯುವ ಮಾಧ್ಯಮ ಬಲಿಷ್ಠವಾಗಿದ್ದರೆ ಮಾತ್ರ ಪ್ರಜಾಪ್ರಭುತ್ವ ಆರೋಗ್ಯಕರವಾಗಿ ಮತ್ತು ಸದೃಡವಾಗಿರಲು ಸಾಧ್ಯ. ಆದರೆ ಮಾಧ್ಯಮವನ್ನು ಹೆದರಿಸಿ ಭಯದಲ್ಲಿರಿಸುವ ಯಾವುದೇ ಪ್ರಯತ್ನಗಳು ಖಂಡನೀಯ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.