ಕೋವಿಡ್ ಸಹಾಯಧನ ಪಡೆಯದಿರುವ ಕಟ್ಟಡ ಕಾರ್ಮಿಕರು ಮಾಹಿತಿ ನೀಡಲು ಸೂಚನೆ
ದಾವಣಗೆರೆ :ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೋವಿಡ್-19 ಎರಡನೇ ಅಲೆಯ ಸಹಾಯಧನದ ಮೊತ್ತ ರೂ.3000/-ಗಳನ್ನು ಕರ್ನಾಟಕ ಸರ್ಕಾರ ಘೋಷಣೆ ಮಾಡಿದ್ದು, ಇದುವರೆಗೂ ಒಂದು ಬಾರಿಯ ಸಹಾಯಧನ ಸ್ವೀಕರಿಸದೇ ಇರುವವರು, ಅಗತ್ಯ ದಾಖಲೆಗಳೊಂದಿಗೆ ನ. 30 ರ ಒಳಗಾಗಿ ಆಯಾ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಚೇರಿ ಸಂಪರ್ಕಿಸಿ ಮಾಹಿತಿ ನೀಡುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಈಗಾಗಲೇ ರೂ.3000/-ಗಳ ಮೊತ್ತವನ್ನು ನೇರ ನಗದು ವರ್ಗಾವಣೆ (ಡಿಬಿಟಿ ಆಧಾರ್) ಮೂಲಕ ಪಾವತಿಸಲು ಇ-ಗರ‍್ನನ್ಸ್ ಇಲಾಖೆಗೆ ಕಳುಹಿಸಲಾಗಿದ್ದು ಈ ರೀತಿ ಕಳುಹಿಸಲಾದ ಡೇಟಾದಲ್ಲಿ ಶೇ.90 ರಷ್ಟು ಕಾರ್ಮಿಕರಿಗೆ ಸಹಾಯಧನ ಪಾವತಿಯಾಗಿರುತ್ತದೆ ಹಾಗೂ ಉಳಿದ ಶೇ.10ರಷ್ಟು ಕಾರ್ಮಿಕರಿಗೆ ವಿವಿಧ ಕಾರಣಗಳಿಂದ ಪಾವತಿಯಾಗಿರುವುದಿಲ್ಲ. ಫಲಾನುಭವಿಯ ಆಧಾರ್ ಸಂಖ್ಯೆ, ಅವರ ಬ್ಯಾಂಕ್ ಖಾತೆಗೆ ಜೋಡಣೆಯಾಗದಿರುವುದು ಹಾಗೂ ಬ್ಯಾಂಕ್‌ನವರು ಈ ಬ್ಯಾಂಕ್ ಖಾತೆಯನ್ನು ಎನ್‌ಸಿಪಿಐ ಗೆ ಮ್ಯಾಪಿಂಗ್ ಮಾಡಿರುವುದಿಲ್ಲವಾದ ಕಾರಣ ನೋಂದಾಯಿತ ಕಟ್ಟಡ ಕಾರ್ಮಿಕರ ಖಾತೆಗೆ ಸಹಾಯಧನದ ಮೊತ್ತವು ಪಾವತಿಯಾಗಿರುವುದಿಲ್ಲ.
ಈ ರೀತಿ ಜೋಡಣೆಯಾಗದಿರುವವರ ಮಾಹಿತಿಯು ಇನ್ಯಾವುದೇ ಕಾರಣದಿಂದ ಸಹಾಯಧನ ದೊರಕದ ಫಲಾನುಭವಿಗಳ ಮಾಹಿತಿಯನ್ನು ಮಂಡಳಿಯ https://karbwwb,karnatak.go.in/page/Covid+19+Relief+DBT+Details/en
ಜಾಲತಾಣದಲ್ಲಿ ಅಪ್‌ಡೇಟ್ ಮಾಡಲು ನ.30 ಕೊನೆಯ ದಿನವಾಗಿರುತ್ತದೆ. ತದನಂತರ ಯಾವುದೇ ಅರ್ಜಿಯನ್ನು ಸಹಾಯಧನ ಮಂಜೂರಾತಿಗೆ ಪರಿಗಣಿಸಲಾಗುವುದಿಲ್ಲ.
ಇದುವರೆಗೂ ಕೋವಿಡ್-19 2ನೇ ಅಲೆಯಲ್ಲಿ ಒಂದು ಬಾರಿಯ ಸಹಾಯಧನ ರೂ.3000/-ವನ್ನು ಮಂಡಳಿಯಿAದ ಸ್ವೀಕರಿಸದೇ ಇರುವ ನೋಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವ ಬಗ್ಗೆ ಹಾಗೂ ಬ್ಯಾಂಕ್‌ನವರು ಈ ಬ್ಯಾಂಕ್ ಖಾತೆಯನ್ನು ಎನ್‌ಸಿಪಿಐ ಗೆ ಮ್ಯಾಪಿಂಗ್ ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡು ಅಗತ್ಯ ದಾಖಲೆಗಳೊಂದಿಗೆ ನ.30 ಒಳಗೆ ಜಿಲ್ಲೆಯ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದೆಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.