ರಸ್ತೆ ಅಪಘಾತದಲ್ಲಿ ಮೃತರಾದ ರಂಗಭೂಮಿ ಕಲಾವಿದರಿಗೆ ಪರಿಹಾರ ನೀಡಲು ಆಗ್ರಹಿಸಿದ ವಿವಿಧ ಸಂಘಟನೆಯ ಮುಖಂಡರು
ದಾವಣಗೆರೆ: ವಿಶ್ವ ರಂಗಭೂಮಿ ದಿನದಂದು ರಸ್ತೆ ಅಪಘಾತದಲ್ಲಿ ಮೃತರಾದ ದಾವಣಗೆರೆ ರಂಗಭೂಮಿ ಕಲಾವಿದರಿಗೆ ಪರಿಹಾರ ಒದಗಿಸಲು ದಾವಣಗೆರೆ ಜಿಲ್ಲಾ ಅಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನ ಸಲ್ಲಿಸಲಾಯಿತು
ದಾವಣಗೆರೆ ನಗರದ ಕೆ ಬಿ ಆರ್ ಡ್ರಾಮ ಕಂಪನಿಯಲ್ಲಿ ರಂಗಭೂಮಿ ಕಲಾವಿದರಾಗಿದ್ದ ಯು ಮಂಜುಳ ಹಾಗೂ ಗೀತಾ ಇವರು ಅಂಕೋಲದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ದಾವಣಗೆರೆಯಿಂದ ಕಾರಿನಲ್ಲಿ ತೆರಳುತ್ತಿದ್ದಾಗ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕಾರ್ಕೋಳ ಗ್ರಾಮದ ಬಳಿ ತಾವು ಪ್ರಯಾಣ ಮಾಡುತ್ತಿದ್ದ ಕಾರಿಗೆ ಲಾರಿ ಗುದ್ದಿ ವಿಶ್ವರಂಗಭೂಮಿ ದಿನದಂದೆ ಸಾವನ್ನಪ್ಪಿದ್ದಾರೆ ಇನ್ನಿಬ್ಬರೂ ಕಲಾವಿದರು ಸಹ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ
ರಂಗಭೂಮಿಯನ್ನೆ ನಂಬಿಕೊಂಡು ಅದರಿಂದಲೆ ತಮ್ಮ ಬದುಕನ್ನ ಕಟ್ಟಿಕೊಂಡಿದ್ದು ಇವರುಗಳೆ ಅವರ ಕುಟುಂಬದ ಅದಾರ ಸ್ಥಂಭವಾಗಿದ್ದು ಇವರ ಕುಟುಂಬಗಳು ಇಂದು ಬಿದಿಪಾಲಿಗಿವೆ ಅದುದರಿಂದ ತಾವುಗಳು ಮರಣಹೊಂದಿದ ರಂಗಭೂಮಿ ಕಾಲವಿದರಿಗೆ ಪರಿಹಾರವನ್ನ ನೀಡಿ ಅವರ ಕುಟುಂಬವನ್ನ ಕಾಪಾಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಯಿ ಅವರಿಗೆ ಮಾನ್ಯ ದಾವಣಗೆರೆ ಜಿಲ್ಲಾ ಅಧಿಕಾರಿಗಳ ಮುಖಾಂತರ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ದಾವಣಗೆರೆ ಇಪ್ಟಾ ಜಿಲ್ಲಾ ಸಂಚಾಲಕರಾದ ಐರಣಿ ಚಂದ್ರು ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ ಎಲ್ ಜಯ್ಯಪ್ಪ
ಎಚ್ಚೆತ್ತ ಕರ್ನಾಟಕ ನವ ನಿರ್ಮಾಣ ವೇಧಿಕೆಯ ರಾಜ್ಯ ಅಧ್ಯಕ್ಷರಾದ ಮಹಾಲಿಂಗಪ್ಪ ಜೆ ಎಚ್ ಎಮ್ ಹೊಳೆ ವಕೀಲರಾದ ತುಪ್ಪದಹಳ್ಳಿ ಸತೀಶ್ ಹೆಚ್ ವಿ ಬಿ ಹನುಮಂತಪ್ಪ ಮುಂತಾದವರು ಹಾಜರಿದ್ದರು