ಡಿ.30 ರಂದು ಕಾನೂನು ಅರಿವು ಹಾಗೂ ಶೇ.5ರ ಅನುದಾನದ ಮಾಹಿತಿ ಕಾರ್ಯಕ್ರಮ

ದಾವಣಗೆರೆ: ಕೇಂದ್ರದಲ್ಲಿ ಅಂತರಾಷ್ಟ್ರೀಯ ಅಂಗವಿಕಲರ ದಿನಾಚರಣೆ ಅಂಗವಾಗಿ ಕಾನೂನು ಅರಿವು ಮತ್ತು ವಿವಿಧ ಇಲಾಖೆಗಳಲ್ಲಿ ಶೇ.5ರ ಅನುದಾನದ ಮಾಹಿತಿ ನೀಡುವ ಕಾರ್ಯಕ್ರಮ ಡಿ.30 ರಂದು ಬೆ.10.30ಕ್ಕೆ ಶಿವಾಲಿ ಟಾಕೀಸ್ ರೋಡ್‍ನಲ್ಲಿರುವ ಕೇಂದ್ರೀಯ ವಿಕಲಚೇತನ ಪುನಶ್ಚೇತನದಲ್ಲಿ ಏರ್ಪಡಿಸಲಾಗಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿ.ಪಂ ಮತ್ತು ತಾ.ಪಂ ಕರ್ನಾಟಕ ರಾಜ್ಯ ಅಂಗವಿಕಲರ ಆರ್.ಪಿ.ಡಿ ಟಾಸ್ಕ್ ಪೋರ್ಸ್ ಸಮಿತಿ, ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ ನಾಯಕ ಉದ್ಘಾಟಿಸುವರು. ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೆ.ಕೆ.ಪ್ರಕಾಶ್ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ವಕಲಾತಿ ವಿಭಾಗದ ಸಹಾಯಕ ನಿರ್ದೇಶಕರಾದ ಬಾಬುಖಾನ್.ಎಸ್, ಹಾಗೂ ಶಿವಪ್ಪ, ನಿಕಟಪೂರ್ವ ಮಹಾಪೌರರದ ಎಸ್.ಟಿ.ವೀರೇಶ್, ಕ.ರಾ.ಅಂ.ಆರ್.ಪಿ.ಡಿ ಟಾಸ್ಕ್ ಪೋರ್ಸ್ ಜಿಲ್ಲಾ ಅಧ್ಯಕ್ಷರಾದ ಹೊನ್ನಪ್ಪ ಆಜ್ಜೋಳ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಡಿ.ಪಿ ಬಸವರಾಜ್, ಹಿರಿಯ ವಕೀಲರಾದ ಅರುಣಕುಮಾರ್.ಎಲ್.ಹೆಚ್, ಮಾಜಿ ದೂಡಾ ಅಧ್ಯಕ್ಷರಾದ ಶಿವಕುಮಾರ್ ರಾಜನಹಳ್ಳಿ ಪಾಲ್ಗೊಳ್ಳುವರೆಂದು ಪ್ರಕಟಣೆ ತಿಳಿಸಿದೆ.