corporation; ಸ್ವಚ್ಛತಾ ಕಾರ್ಮಿಕರ ಸಂಘಟನೆಯ ವಿಭಾಗಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ದಾವಣಗೆರೆಯ ಎಲ್ ಎಂ ಹೆಚ್ ಸಾಗರ್ ನೇಮಕ
ದಾವಣಗೆರೆ; corporation ದಾವಣಗೆರೆ ನಗರದ ಸಾಗರ್. ಎಲ್.ಎಂ.ಹಚ್ ರವರು ಕರ್ನಾಟಕ ರಾಜ್ಯ ವಿಭಾಗ್ಯ ದಾವಣಗೆರೆ ಚಿತ್ರದುರ್ಗ ಹಾವೇರಿ ಶಿವಮೊಗ್ಗ ಜಿಲ್ಲೆಗಳ ಪೌರಕಾರ್ಮಿಕರು, ವಾಹನ ಚಾಲಕರು ಒಳಚರಂಡಿ ಕಾರ್ಮಿಕರ ಸಂಘಟನೆಯ ವಿಭಾಗೀಯ ರಾಜ್ಯ ಕಾರ್ಯದರ್ಶಿಯಾಗಿ ಕರ್ನಾಟಕ ರಾಜ್ಯದ ರಾಜ್ಯ ಸಂಘಟನೆಯ ರಾಜ್ಯಾಧ್ಯಕ್ಷರು, ಸಫಾಯಿ ಕರ್ಮಚಾರಿ ಮಾಜಿ ಅಧ್ಯಕ್ಷರಾದ ಮೈಸೂರ್ ನಾರಾಯಣ್ ರವರು ಆಯ್ಕೆ ಮಾಡಿರುತ್ತಾರೆ.
ಇತ್ತೀಚಿಗೆ ಬೆಂಗಳೂರು ನಗರದ ಗಾಂಧಿ ಭವನದಲ್ಲಿ ನಡೆದ ಪೌರಕಾರ್ಮಿಕರ ಹಾಗೂ ವಾಹನ ಚಾಲಕರ ಒಳಚರಂಡಿ ಕಾರ್ಮಿಕರ ಸಂಘದ ಮೈಸೂರ್ ನಾರಾಯಣ್ ರವರ ಸಂಘಟನೆಯ ರಾಜ್ಯ ಕಾರ್ಯಕಾರಿ ಸಭೆ ನಡೆಸಲಾಯಿತು.
ನಮ್ಮ ದಾವಣಗೆರೆ ನಗರದ ಪೌರಕಾರ್ಮಿಕರ ಸಂಘದ ಉಪಾಧ್ಯಕ್ಷರು ಆಗಿರುವ ಸಾಗರ್ ಎಲ್ ಎಮ್ ಹೆಚ್ ರವರ ಕಾರ್ಮಿಕ ಸಂಘಟನೆ, ಕಾರ್ಮಿಕ ಸಂಘಟನೆಯ ಚತುರತೆಯನ್ನು ಮನಗಂಡು ರಾಜ್ಯ ಅದ್ಯಕ್ಷರು ವಿಭಾಗೀಯ ಪ್ರದೇಶವಾದ ದಾವಣಗೆರೆ ಜಿಲ್ಲೆ, ಚಿತ್ರದುರ್ಗ ಜಿಲ್ಲೆ, ಶಿವಮೊಗ್ಗ ಜಿಲ್ಲೆ, ಹಾವೇರಿ ಜಿಲ್ಲೆಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪೌರಕಾರ್ಮಿಕ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.