ಲೋಕಸಭೆ ಚುನಾವಣೆ ಹಿನ್ನೆಲೆ ದಾವಣಗೆರೆ ಎಎಸ್ಪಿ ವಿಜಯ್ ಕುಮಾರ್ ಸಂತೋಷ್ ವರ್ಗಾವಣೆ

ದಾವಣಗೆರೆ : ಲೋಕಸಭೆ ಚುನಾವಣೆ ಹಿನ್ನೆಲೆ ದಾವಣಗೆರೆ ಎಎಸ್ಪಿ ವಿಜಯ್ ಕುಮಾರ್ ಸಂತೋಷ್ ವರ್ಗಾವಣೆಗೊಂಡಿದ್ದಾರೆ. ಇವರ ಜಾಗಕ್ಕೆ ಬೆಂಗಳೂರು ಗ್ರಾಮಾಂತರ ಎಎಸ್ಪಿ ಪಿ.ನಾಗೇಶ್ ಕುಮಾರ್ ರವರನ್ನು ನೇಮಕ ಮಾಡಲಾಗಿದೆ.

ಇತ್ತೀಚೆಗೆ ಎಎಸ್ಪಿ ವಿಜಯ್ ಕುಮಾರ್ ಸಂತೋಷ್ ರವರನ್ನು ದಾವಣಗೆರೆಗೆ ವರ್ಗಾವಣೆ ಮಾಡಲಾಗಿತ್ತು. ಕಡಿಮೆ ಅವಧಿಯಲ್ಲಿ ಎಸ್ಪಿ ಉಮಾಪ್ರಶಾಂತ್ ನೇತೃತ್ವದಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದರು. ಆದ್ದರಿಂದ ಬೆಂಗಳೂರು ಗ್ರಾಮಾಂತರ ಎಎಸ್ಪಿಯಾಗಿ ಈ ಕೂಡಲೇ ಅಧಿಕಾರ ಸ್ವೀಕಾರ ಮಾಡಬೇಕೆಂದು ಪೊಲೀಸ್ ಮಹಾ ನಿರ್ದೇಶಕ, ಆರಕ್ಷಕ ಮಹಾನಿರೀಕ್ಷಕ ಸೌಮೇಂದು ಮುಖರ್ಜಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!