ಲೋಕಸಭಾ ಚುನಾವಣೆ, ಕಾಂಗ್ರೆಸ್ ಪಕ್ಷದ ಡಾ; ಪ್ರಭಾ ಮಲ್ಲಿಕಾರ್ಜುನ್ 26094 ಮತಗಳ ಅಂತರದಿಂದ ಜಯಶಾಲಿ

ದಾವಣಗೆರೆ:  ಲೋಕಸಭಾ ಸಾರ್ವತ್ರಿಕ ಚುನಾವಣೆ ನಡೆದಿದ್ದು ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಾ; ಪ್ರಭಾ ಮಲ್ಲಿಕಾರ್ಜುನ್ ಅವರು 26094 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.
ಲೋಕಸಭಾ ಚುನಾವಣೆ ದೇಶದಲ್ಲಿ  7 ಹಂತಗಳಲ್ಲಿ ನಡೆದಿದ್ದು ರಾಜ್ಯದಲ್ಲಿ ಎರಡನೇ ಹಾಗೂ ಮೂರನೇ ಹಂತದಲ್ಲಿ ಚುನಾವಣೆ ನಡೆದಿದ್ದು ದಾವಣಗೆರೆ ಲೋಕಸಭಾ ಚುನಾವಣೆಗೆ ಮೇ 7 ರಂದು ಮತದಾನ ನಡೆದಿತ್ತು. ಜೂನ್ 4 ರಂದು ದಾವಣಗೆರೆ ವಿಶ್ವವಿದ್ಯಾನಿಯದಲ್ಲಿ ಮತ ಎಣಿಕೆ ನಡೆಯಿತು.

ಕಾಂಗ್ರೆಸ್ ಪಕ್ಷದ ಡಾ;ಪ್ರಭಾ ಮಲ್ಲಿಕಾರ್ಜುನ್ ಅವರು ಅಂಚೆ ಮತಗಳು ಸೇರಿದಂತೆ 633059 ಮತಗಳನ್ನು ಪಡೆದು ಇವರ ಸಮೀಪ ಸ್ಪರ್ಧಿ ಬಿ.ಜೆ.ಪಿ.ಯ ಗಾಯತ್ರಿ ಸಿದ್ದೇಶ್ವರ್ ಅವರು 606965 ಮತಗಳನ್ನು ಪಡೆದ್ದು 26094 ಮತಗಳ ಅಂತರದಿಂದ ಡಾ; ಪ್ರಭಾ ಮಲ್ಲಿಕಾರ್ಜುನ್ ಜಯಶಾಲಿಯಾಗಿದ್ದಾರೆ.

ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಿಂದ 1709244 ಒಟ್ಟು ಮತದಾರರಲ್ಲಿ 1315746 ಮತದಾರರು ಮೇ 7 ರಂದು ಮತದಾನ ಮಾಡಿದ್ದರು. ಮತ ಎಣಿಕೆಯನ್ನು ಪ್ರತಿ ಕ್ಷೇತ್ರದಲ್ಲಿ 14 ಟೇಬಲ್‍ಗಳಲ್ಲಿ ಎಣಿಕೆ ನಡೆಸಲಾಗಿರುತ್ತದೆ.

ಪಕ್ಷವಾರು, ಕಣದಲ್ಲಿದ್ದ ಅಭ್ಯರ್ಥಿಗಳು ಪಡೆದ ಮತಗಳ ವಿವರ; ಬಿ.ಜೆ.ಪಿ. ಗಾಯಿತ್ರಿ ಸಿದ್ದೇಶ್ವರ್ 606965, ಕಾಂಗ್ರೆಸ್ ಪಕ್ಷದ ಡಾ; ಪ್ರಭಾ ಮಲ್ಲಿಕಾರ್ಜುನ್ 633059,  ಡಿ.ಹನುಮಂತಪ ಬಹುಜನ ಸಮಾಜ ಪಾರ್ಟಿ 4475, ಈಶ್ವರ ಶೇಂಗಾ, ಉತ್ತಮ ಪ್ರಜಾಕೀಯ ಪಾರ್ಟಿ 1430, ಅಣಬೇರು ತಿಪ್ಪೇಸ್ವಾಮಿ, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) 849, ಎಂ.ಪಿ.ಖಲಂದರ್, ಕಂಟ್ರಿ ಸಿಟಿಜನ್ ಪಾರ್ಟಿ 539, ದೊಡ್ಡೇಶಿ ಹೆಚ್.ಎಸ್, ಜನಹಿತ ಪಕ್ಷ 440, ರುದ್ರೇಶ್ ಕೆ.ಹೆಚ್, ಸಮಾಜ ವಿಕಾಸ ಕ್ರಾಂತಿ ಪಾರ್ಟಿ 348, ವಿರೇಶ್.ಎಸ್ (ಲಯನ್ ವಿರೇಶ್), ರಾಣಿ ಚೆನ್ನಮ್ಮ ಪಾರ್ಟಿ 459,  ಕೆ.ಎಸ್.ವೀರಭದ್ರಪ್ಪ, ಕರ್ನಾಟಕ ರಾಷ್ಟ್ರ ಸಮಿತಿ 475, ಎಂ.ಜಿ.ಶ್ರೀಕಾಂತ್, ನವಭಾರತ ಸೇನಾ 560, ಎಂ.ಸಿ.ಶ್ರೀನಿವಾಸ್, ಭಾರತೀಯ ಪ್ರಜಾಗಳ ಕಲ್ಯಾಣ ಪಕ್ಷ 974, ಪಕ್ಷೇತರರಾದ ಅಬ್ದುಲ್ ನಜೀರ್ ಅಹಮೆದ್ 652, ಎ.ಕೆ.ಗಣೇಶ್ 1055, ಜಿ.ಎಂ.ಗಾಯಿತ್ರಿ ಸಿದ್ದೇಶಿ  2462, ಟಿ.ಚಂದ್ರು 3049, ಟಿ.ಜಬೀನಾ ಆಪಾ  5122, ತಸ್ಲೀಮ್ ಬಾನು 4140, ಪರವೀಜ್ ಹೆಚ್. 1868, ಪೆದ್ದಪ್ಪ.ಎಸ್ 513,  ಬರಕತ್ ಅಲಿ 409, ಜಿ.ಎಂ.ಬರ್ಕತ್ ಅಲಿ ಬಾಷ 472, ಮಹಬೂಬ್ ಬಾಷ  306,  ಮೊಹ್ಮದ್ ಹಯಾತ್.ಎಂ, 723, ಮಂಜು ಮಾರಿಕೊಪ್ಪ  379, ರವಿನಾಯ್ಕ.ಬಿ. 319, ರಷೀದ್ ಖಾನ್  599, ಜಿ.ಬಿ.ವಿನಯ್ ಕುಮಾರ್  ಇವರು ಗಳಿಸಿದ ಮತಗಳು 42907, ಸಲೀಂ.ಎಸ್. 800, ಸೈಯದ್ ಜಬೀವುಲ್ಲಾ.ಕೆ  843, ನೊಟಾ  3173 ಮತಗಳು ಸೇರಿವೆ.

Leave a Reply

Your email address will not be published. Required fields are marked *

error: Content is protected !!