10ನೇ ವಾರ್ಡ್‍ನಲ್ಲಿ ಶಾಮನೂರು ಶಿವಶಂಕರಪ್ಪನವರಿಂದ ಅಬ್ಬರದ ಪ್ರಚಾರ

10ನೇ ವಾರ್ಡ್‍ನಲ್ಲಿ ಶಾಮನೂರು ಶಿವಶಂಕರಪ್ಪನವರಿಂದ ಅಬ್ಬರದ ಪ್ರಚಾರ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರ ಪರವಾಗಿ ಏ.8ರ ಶನಿವಾರದಂದು ದಾವಣಗೆರೆ ಮಹಾನಗರ ಪಾಲಿಕೆಯ 10ನೇ ವಾರ್ಡ್‍ನಲ್ಲಿ ಅಬ್ಬರ ಪ್ರಚಾರ ನಡೆಯಿತು.
ದೊಡ್ಡಪೇಟೆಯ ಶ್ರೀ ಗಣೇಶ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ,ವಾರ್ಡ್‍ನ ಪ್ರಮುಖ ಬೀದಿಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಅನಿತಾಬಾಯಿ ಮಾಲತೇಶ್, ಡೂಡಾ ಮಾಜಿ ಅಧ್ಯಕ್ಷ ಮಾಲತೇಶ್ ಪೈಲ್ವಾನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ವಾರ್ಡ್ ಅಧ್ಯಕ್ಷ ಸತ್ಯನಾರಾಯಣ, ಮುಖಂಡರುಗಳಾದ ಬಾಬುರಾವ್ ಸಾಳಂಕಿ, ಪಿ.ಜೆ.ನಾಗರಾಜ್ ಅವರ ನೇತೃತ್ವದಲ್ಲಿ ಪ್ರಚಾರ ನಡೆಸಲಾಯಿತು.
ನಂತರ ಕಾರ್ಯಕರ್ತರನ್ನು ಮತ್ತು ಮತದಾರರನ್ನುದ್ದೇಶಿಸಿ ಮಾತನಾಡಿದ ಶಾಮನೂರು ಶಿವಶಂಕರಪ್ಪನವರು ದಾವಣಗೆರೆ ನಗರ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ಧರಾಗಿದ್ದು, ಈ ನಿಟ್ಟಿನಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದ್ದು, ಇನ್ನು ಕೆಲಸ ಆಗಬೇಕಿದ್ದು, ಇದಕ್ಕೆ ಮತ್ತೋಮ್ಮೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.
ಬರುವ ತಿಂಗಳು 10ರಂದು ಚುನಾವಣೆ ನಡೆಯಲಿದ್ದು ಕ್ಷೇತ್ರದ ಅಭಿವೃದ್ದಿ, ಶಾಂತಿ- ಸಹಬಾಳ್ವೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ನನಗೆ ಮತ ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೆಚ್.ಬಿ.ಗೋಣೆಪ್ಪ, ಎಂ.ಮಂಜುನಾಥ್, ಎಸ್.ಮಲ್ಲಿಕಾರ್ಜುನ್, ಉಮೇಶ್ ಸಾಳಂಕಿ, ತರಕಾರಿ ಚಂದ್ರಪ್ಪ, ಎಸ್.ಬಸಪ್ಪ, ಹನುಮಂತರಾವ್ ಜಾಧವ್, ಮಂಜುನಾಥ ಸಾಳಂಕಿ, ಪ್ರಕಾಶ್ ಅಂಬೋಜಿ, ವೀರಣ್ಣ, ಸಿಮೇಎಣ್ಣೆ ಮಲ್ಲೇಶ್, ನಾಗರಾಜ್, ಬಾಬುರಾವ್, ಭೈರೇಶ್, ದುರುಗಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಪದಾಧಿಕಾರಿಗಳು, ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!