ಮದಕರಿನಾಯಕ ಥೀಮ್ ಪಾರ್ಕ್, ಶ್ರೀರಾಮುಲುಗೆ ಡಿಸಿಎಂ ಸ್ಥಾನದ ಘೋಷಣೆ ಕಾರ್ಯರೂಪಕ್ಕೆ ಆಗ್ರಹ
ದಾವಣಗೆರೆ: ಚಿತ್ರದುರ್ಗದಲ್ಲಿ ಮದಕರಿ ನಾಯಕರ ಥೀಮ್ ಪಾರ್ಕ್ ಮಾಡುವಂತೆ ಹಾಗೂ ಸಚಿವ ಶ್ರೀರಾಮುಲುಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಅಂಜುಕುಮಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಮನವಿ ಮಾಡಿದ್ದಾರೆ.
ಚಿತ್ರದುರ್ಗಕ್ಕೆ ಅಮಿತ್ ಷಾ ಅವರು ಈ ಹಿಂದೆಯೇ ಆಗಮಿಸಿದ ವೇಳೆ ಮದಕರಿನಾಯಕರ ಹೆಸರಿನಲ್ಲಿ ಸುಮಾರು 100 ಕೋಟಿ ರೂ., ವೆಚ್ಚದಲ್ಲಿ ‘ಮದಕರಿ ನಾಯಕರ ಥೀಮ್ ಪಾರ್ಕ್’ ನಿರ್ಮಾಣ ಮಾಡುವುದಾಗಿ ನೀಡಿದ್ದ ಭರವಸೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ರಾಜ್ಯ ಬಿಜೆಪಿ ಘೋಷಿಸಿತ್ತು ಆದರೆ ಇದುವರೆಗೂ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಆದ್ದರಿಂದ, ಕೂಡಲೇ ಈ ಎರಡೂ ವಿಚಾರದಲ್ಲಿ ವಾಲ್ಮೀಕಿ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಸಚಿವ ಅಮಿತ್ ಷಾ ಅವರಿಗೆ ಕೋರಿದ್ದಾರೆ.